Header Ads
Header Ads
Breaking News

ಪತ್ರಕರ್ತರಿಗೆ ಸಮಯಪ್ರಜ್ಞೆ ಅತ್ಯವಶ್ಯಕ : ಪ್ರಸಾದ್ ಹೆಗಡೆ

ಉಜಿರೆ, ಅ.22: ಕ್ರೀಡಾ ಪತ್ರಕರ್ತರಿಗೆ ಸಮಯ ಪ್ರಜ್ಞೆ ಮತ್ತು ಕ್ರಿಯಾತ್ಮಕ ಯೊಚನೆ ಅತ್ಯಗತ್ಯ ಎಂದು ಕ್ರೀಡಾ ವರದಿಗಾರ ಪ್ರಸಾದ್ ಹೆಗಡೆ ಹೇಳಿದರು.
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಹಾಗೂ ಸಮೂಹನ ವಿಭಾಗವು ಹಮ್ಮಿಕೊಂಡಿದ್ದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸುದ್ದಿ ಮಾಧ್ಯಮಗಳಲ್ಲಿ ಸುದ್ದಿಯನ್ನು ಬಿತ್ತರಿಸುವ ಧಾವಂತವಿರುತ್ತದೆ. ಸಂದರ್ಭಕ್ಕೆ ಅನುಸಾರವಾಗಿ ಸುದ್ದಿಯನ್ನು ನೀಡುವ ಪ್ರಜ್ಞೆ ವರದಿಗಾರನಲ್ಲಿರಬೇಕು. ಸಣ್ಣ ವಿಷಯಗಳಿಗೂ ಒತ್ತು ನೀಡಿ ಕ್ರಿಯಾತ್ಮಕವಾಗಿ ಸುದ್ದಿಯನ್ನು ನೀಡಬೇಕು ಎಂದರು.

ಕ್ರೀಡಾ ಪತ್ರಕರ್ತರಾಗಲು ಕ್ರೀಡೆಯ ಬಗ್ಗೆ ಆಸಕ್ತಿ ಮುಖ್ಯವಾಗಿದ್ದು, ಪ್ರತಿಯೊಂದು ಕ್ರೀಡೆಯ ಮಾಹಿತಿಯನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿರುತ್ತದೆ. ಪ್ರಚಲಿತ ವಿದ್ಯಮಾನಗಳ ಬಗ್ಗೆ ಜಾಗೃತರಾಗಿದ್ದಾಗ ಮಾತ್ರ ವಿಶೇಷವಾದಂತಹ ಸುದ್ದಿಯನ್ನು ಕಟ್ಟಲು ಸಾಧ್ಯ ಎಂದು ಹೇಳಿದರು.

ಸುದ್ದಿವಾಹಿನಿಗಳಲ್ಲಿ ಕ್ರೀಡಾ ಪತ್ರಕರ್ತರಿಗೆ ಹೆಚ್ಚಿನ ಅವಕಾಶಗಳಿವೆ. ವರದಿಗಾರಿಕೆಯ ಕ್ಷೇತ್ರವನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ನಿರ್ಧರಿಸಿ ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುವುದು ಭವಿಷ್ಯದಲ್ಲಿ ಸಹಾಯಕವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಎಸ್.ಡಿ.ಎಂ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗಿನ ಅನುಭವಗಳನ್ನು ಮೆಲುಕು ಹಾಕಿಕೊಂಡ ಪ್ರಸಾದ್, ’ನಮ್ಮೂರ ವಾರ್ತೆ’ಗೆ ಸುದ್ದಿ ತರುತ್ತಿದ್ದ ಸ್ವಾರಸ್ಯಕರ ವಿಧಾನಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ. ಭಾಸ್ಕರ್ ಹೆಗಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅನುವಿತ್ ಗೌಡ ವಂದಿಸಿದರು.

 

 

Related posts

Leave a Reply

Your email address will not be published. Required fields are marked *