Header Ads
Header Ads
Breaking News

ಪತ್ರಕರ್ತೆ ಗೌರಿ ಹತ್ಯೆಗೆ ಒಂದು ವರುಷ. ಗೌರಿ ಬಳಗದಿಂದ ಕುಂದಾಪುರದಲ್ಲಿ ನುಡಿನಮನ, ಸಂಸ್ಮರಣೆ. ಮೊಂಬತ್ತಿ ಬೆಳಗಿ ನುಡಿನಮನ ಸಲ್ಲಿಕೆ.

ಪತ್ರಕರ್ತೆ ಗೌರಿ ಹತ್ಯೆಗೆ ಒಂದು ವರುಷ ಸಂದ ಹಿನ್ನೆಲೆ ಬುಧವಾರ ಸಂಜೆ ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಗೌರಿ ಬಳಗ ನುಡಿನಮನ ಕಾರ್ಯಕ್ರಮವನ್ನು ಆಯೋಜಿಸಿತು.ಈ ಸಂದರ್ಭ ಉಪನ್ಯಾಸಕರಾದ ಪ್ರದೀಪ್ ಶೆಟ್ಟಿಯವರು ಕೋಮುವಾದಿ ಶಕ್ತಿಗಳು ವಿಶೇಷವಾದ ಪದಪೂಂಜಗಳ ಮೂಲಕ ಆರ್ಭಟಿಸುತ್ತಾ, ಕೆರಳಿಸುವ ರೀತಿಯಲ್ಲಿ ಮಾತನಾಡುತ್ತಾರೆ. ವಿಚಾರವನ್ನು ಮುಟ್ಟಿಸುವುದಕ್ಕೆ ಹಾರಿ, ಕುಣಿದು, ವಿಜೃಂಭಿಸಿ ಮಾತನಾಡುವ ಅಗತ್ಯವಿಲ್ಲ. ಹೇಳುವ ವಿಚಾರ ಸರಿ ದಾರಿಯಲ್ಲಿದ್ದರೆ ಖಂಡಿತ ಆ ವಿಚಾರ ಸ್ವೀಕಾರ್ಹವಾಗುತ್ತದೆ ಎಂದರು.

ಗೌರಿ ಬಳಗದ ಪ್ರಮುಖ, ಪತ್ರಕರ್ತ ರಾಮಕೃಷ್ಣ ಹೇರ್ಳೆ ಮಾತನಾಡಿ, ನೀವು ಒಬ್ಬರನ್ನು ಕೊಂದರೆ ನಾವು ನೂರು ಜನ ಹುಟ್ಟುಕೊಳ್ಳುತ್ತೇವೆ, ನೀವು ನೂರು ಜನರನ್ನು ಕೊಂದರೆ ನಾವು ಸಾವಿರ ಜನ ಹುಟ್ಟುಕೊಳ್ಳುತ್ತೇವೆ. ಈ ಸಮಾಜವಾದ ನೆಲೆಯಲ್ಲಿ ಧರ್ಮಸೌಹಾರ್ದ, ಸಾಮಾಜಿಕ ಸಾಮರಸ್ಯ ಇರುವಂತಹ ಈ ಸಮಾಜವನ್ನು ಕಟ್ಟಲಿಕ್ಕೆ ನಾವೆಲ್ಲರೂ ಗೌರಿಯಿಂದ ಪ್ರೇರೆಪಿತರಾಗಿ ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ ಎಂದರು.ನಗರ ಕಾಂಗ್ರೆಸ್, ದಲಿತ ಸಂಘರ್ಷ ಸಮಿತಿ, ಡಿವೈಎಫ್‌ಐ, ಎಸ್‌ಎಫ್‌ಐ, ಸಮುದಾಯ ಕುಂದಾಪುರ ಮೊದಲಾದ ಸಂಘಟನೆಗಳ ಮುಖಂಡರು ಭಾಗವಹಿಸಿ ಪತ್ರಕರ್ತೆ ಗೌರಿ ಲಂಕೇಶ್ ಭಾವಚಿತ್ರದ ಎದುರು ಮೊಂಬತ್ತಿ ಬೆಳಗಿ ನುಡಿನಮನ ಸಲ್ಲಿಸಿದರು.

Related posts

Leave a Reply