Header Ads
Header Ads
Breaking News

ಪತ್ರಕರ್ತ ಜಿತೇಂದ್ರ ಕುಂದೇಶ್ವರ್‌ಗೆ ತಿ.ತಾ.ಶರ್ಮ ಪ್ರಶಸ್ತಿ

ಪತ್ರಕರ್ತ ಜಿತೇಂದ್ರ ಕುಂದೇಶ್ವರ ಅವರಿಗೆ ತೀ.ತಾ.ಶರ್ಮ ಪತ್ರಿಕೋದ್ಯಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಬೆಂಗಳೂರಿನಲ್ಲಿರುವ ರಾಷ್ಟೋತ್ಥಾನ ಶಾರೀರಿಕ ಕೇಂದ್ರದಲ್ಲಿ ನಾರದ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಲಾಯ್ತು. ಪ್ರಶಸ್ತಿ ಸ್ವೀಕಾರಿಸಿ ಮಾತನಾಡಿದ ಜಿತೇಂದ್ರ ಕುಂದೇಶ್ವರ,ಯೋಧರನ್ನು ದ್ವೇಷಿಸುವವರು ಉಗ್ರರನ್ನು ಬೆಂಬಲಿಸುವವರು, ಧರ್ಮ ನಿಂದಕರು, ಧರ್ಮ ಭಂಜಕರೆಲ್ಲರೂ ದೇಶ ದ್ರೋಹಿಗಳು ಅಂತಾ ಹೇಳಿದರು.
 ಇನ್ನು ಪ್ರಶಸ್ತಿ ಸಮಾರಂಭದಲ್ಲಿ ಹಸಿರುವಾಸಿ ಪಾಕ್ಷಿಕೆಯ ಸಂಪಾದಕ ರಾಧಾಕೃಷ್ಣ, ಚಂದ್ರಶೇಕರ್ ಭಂಡಾರಿ, ಟ್ರಸ್ಟಿ ಡಾ. ವಿ.ಶ್ರೀಧರ್, ಆರ್‌ಎಸ್‌ಎಸ್‌ನ ಪ್ರದೀಪ್, ತಿಪ್ಪೇಸ್ವಾಮಿ, ಮಂಜುನಾಥ, ಪ್ರವೀಣ್, ಪಟವರ್ಧನ್, ರಾಧಾಕೃಷ್ಣ ಹೊಳ್ಳ, ರಾಘವೇಂದ್ರ ಉಪಸ್ಥಿತರಿದ್ದರು.

Related posts

Leave a Reply