Header Ads
Header Ads
Breaking News

ಪತ್ರಿಕಾ ವಿತರಕರ ದಿನಾಚರಣೆ. ಗೋಕುಲ್ ದಾಸ್ ನಾಯಕ್‌ಗೆ ಸನ್ಮಾನ. ನಾಗರೀಕ ಸಮಿತಿಯಿಂದ ಕಾರ್ಯಕ್ರಮ.

 ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಇವರ ವತಿಯಿಂದ ಪತ್ರಿಕೆ ವಿತರಕರ ದಿನಾಚರಣೆಯನ್ನು ರಥಬೀದಿಯಲ್ಲಿರುವ ಎಸ್ ಏನ್ ನ್ಯೂಸ್ ಏಜೆನ್ಸಿ ಆಶ್ರಯದಲ್ಲಿ ನಡೆಯಿತು.ಪತ್ರಿಕಾ ವಿತರಕರಾದ ಎಸ್ ಗೋಕುಲ್ ದಾಸ್ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಹವ್ಯಾಸಿ ಪತ್ರಕರ್ತ ತಾರಾನಾಥ್ ಮೇಸ್ತ, ಉದ್ಯಮಿ ಪದ್ಮನಾಭ ರಾವ್, ವಿಜಯ ರಾಘವ, ವೆಂಕಟರಾಯ ನಾಯಕ್, ನರಸಿಂಹ ನಾಯಕ್, ಮತ್ತಿತರರು ಉಪಸ್ಥಿತರಿದ್ದರು.

1940ರಲ್ಲಿ ಸಗ್ರಿ ಗೋಪಾಲ ನಾಯಕ್ ಅವರು ಎಸ್.ಎನ್ ನ್ಯೂಸ್ ಏಜೆನ್ಸಿಯನ್ನು ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಸ್ಥಾಪನೆ ಮಾಡಿದರು. 1944ರಲ್ಲಿ ಅವರ ನಿಧನದ ಬಳಿಕ ಅವರ ಸಹೋದರ ಸಗ್ರಿ ಗೋವಿಂದ ನಾಯಕ್ ಪತ್ರಿಕೆ ವಿತರಣೆಯನ್ನು1999 ರ ವರೆಗೆ ತಮ್ಮ ಮಕ್ಕಳಾದ ಎಸ್ ಗೋಕುಲ್ ದಾಸ್ ನಾಯಕ್, ಎಸ್ ನರಸಿಂಹ ನಾಯಕ್ ಜೊತೆಗೂಡಿಕೊಂಡು ಮುನ್ನಡೆಸಿದರು. ಗೋವಿಂದ ನಾಯಕ್ ನಿಧನ ಹೊಂದಿದ ಬಳಿಕ ಇದುವರೆಗೆ ಅವರ ಮಗ ಗೋಕುಲ್ ದಾಸ್ ನಾಯಕ್ ಪತ್ರಿಕಾ ವಿತರಣೆ ನಡೆಸುತ್ತಿದ್ದಾರೆ. ಎಸ್.ಎನ್ ನ್ಯೂಸ್ ಏಜೆನ್ಸಿಯನ್ನು ಇವಾಗ ಮೂರನೇ ತಲೆಮಾರು ನಡೆಸುತ್ತಿರುವುದು. ಈ ಸಂಸ್ಥೆಯಿಂದ ಕಳೆದ 78 ವರ್ಷಗಳಿಂದ ಪತ್ರಿಕೆ ವಿತರಣಾಸೇವೆ ನಡೆಯುತ್ತಿದೆ. ಅವರ ಪತ್ರಿಕಾರಂಗದ ಸೇವೆಯನ್ನು ಗುರುತಿಸಿ ನಾಗರಿಕ ಸಮಿತಿ ಸನ್ಮಾನಿಸಿತು.

Related posts

Leave a Reply