Header Ads
Breaking News

ಪಬ್ಜೀಯನ್ನು ನಿಷೇಧ ಮಾಡಬೇಕು : ಮಾಜಿ ಸಚಿವ ಯು.ಟಿ. ಖಾದರ್

ದೇಶದ ಮಾನವ ಸಂಪನ್ಮೂಲ ಶಿಥಿಲಗೊಳಿಸಲು ಪರೋಕ್ಷ ಯುದ್ಧ ಮಾಡಲಾಗುತ್ತಿರುವ ಗೇಮ್ ಪಬ್ ಜೀಯನ್ನು ಕೇಂದ್ರಸರ್ಕಾರ ಸಂಪೂರ್ಣ ನಿಷೇಧಕ್ಕೆ ಕಾನೂನು ಮಾಡಬೇಕು ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದರು.

ಅವರು ಮಂಗಳೂರಿನಲ್ಲಿ ಮಾದ್ಯಮಗೋಷ್ಠಿ ನಡೆಸಿ ಮಾತನಾಡಿ ಪಬ್ ಜೀ ವಿರುದ್ಧಕೇಂದ್ರ ಮತ್ತು ರಾಜ್ಯ ಸರ್ಕಾರ ಕಠಿಣ ಕಾನೂನು ಕೈಗೊಳ್ಳಬೇಕು. ವಿದ್ಯಾರ್ಥಿ ಸಮುದಾಯ ವಿಡಿಯೋ ಗೇಮ್ ನಿಂದ ಕ್ರೂರ ಮನಸ್ಥಿತಿ ಹೊಂದುತ್ತಿದ್ದಾರೆ. ನಾಲ್ಕು ಗೋಡೆ ನಡುವೆ ಮೊಬೈಲ್‍ನಲ್ಲೇ ತಲ್ಲೀಣರಾಗುತ್ತಿದ್ದಾರೆ ಕೆ ಸಿ ರೋಡ್ ನ ಘಟನೆ ಯಿಂದ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ. ಸರ್ಕಾರದ ಜೊತೆ ಶಾಲಾ-ಕಾಲೇಜು ಆಡಳಿತ ಮಂಡಳಿ,ಸಂಘ ಸಂಸ್ಥೆಗಳು ಜೊತೆಯಾಗಬೇಕು .ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೌನ್ಸಿಲಿಂಗ್ ಮಾಡುವ ವ್ಯವಸ್ಥೆ ಮಾಡಲೇಬೇಕು ಸೈಬರ್ ಪ್ರಕರಣ ಸಂಬಂಧಿಸಿದಂತೆ ಜನಜಾಗೃತಿ ಮೂಡಿಸಬೇಕು ಎಂದು ಹೇಳಿದರು.

Related posts

Leave a Reply

Your email address will not be published. Required fields are marked *