Breaking News

ಪರಮಾಣು ವಿದ್ಯುತ್ ಮತ್ತು ಸ್ನೇಹ ನೆಲೆ, ಪುತಿನ್ ಮತ್ತು ಮೋದಿ ಭಾರತ ರಶಿಯಾ ಪರ ಒಪ್ಪಂದ

ತಮಿಳುನಾಡಿನ ಕೂಡುಂಕುಳಂದಲ್ಲಿರುವ ಪರಮಾಣು ವಿದ್ಯುತ್ ಸ್ಥಾವರದಲ್ಲಿ ೫ ಮತ್ತು ೬ನೇ ಘಟಕ ಸ್ಥಾಪನೆ ಸಂಬಂಧದ ಒಪ್ಪಂದಕ್ಕೆ ಭಾರತ ಮತ್ತು ರಷ್ಯಾ ಸಹಿ ಹಾಕಿವೆ.
ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಡುವೆ ಉಭಯ ರಾಷ್ಟ್ರಗಳ ವಾರ್ಷಿಕ ಸಮ್ಮೇಳನದ ಮಾತುಕತೆಯ ಸಂದರ್ಭದಲ್ಲಿ ಬಹು ನಿರೀಕ್ಷಿತವಾದ ಈ ಒಪ್ಪಂದಕ್ಕೆ ಸಹಿ ಬಿದ್ದಿದೆ. ಭಾರತೀಯ ಪರಮಾಣು ವಿದ್ಯುತ್ ನಿಗಮ ಮತ್ತು ರಷ್ಯಾದ ಆಟಮ್ಸ್ಟ್ರೋಯ್‌ಎಕ್ಸ್ಪೋರ್ಟ್ ಕಂಪೆನಿ ಜಂಟಿಯಾಗಿ ನಿರ್ಮಿಸಲಿರುವ ಈ ಘಟಕಗಳು ತಲಾ ೧,೦೦೦ ಮೆ.ವಾ ವಿದ್ಯುತ್ ಉತ್ಪಾದಿಸಲಿವೆ.
೨ನೇ ವಿಶ್ವ ಮಹಾ ಸಮರದ ೫ ಲಕ್ಷ ಸಂತ್ರಸ್ತರು ಮತ್ತು ೯೦೦ ದಿನಗಳ ಲೆನಿನ್ಗ್ರಾಡ್ ಒತ್ತೆ ಪ್ರಕರಣದ ಸಂತ್ರಸ್ತರ ಅಂತ್ಯಸಂಸ್ಕಾರ ನಡೆಸಿದ್ದ ಪಿಸ್ಕರಿಯೊವಿಸ್ಕೊಯ್ ಸ್ಮಶಾನಕ್ಕೆ ಭೇಟಿ ನೀಡಿದ್ದನ್ನು ಮೋದಿ ತಮ್ಮ ಭಾಷಣದಲ್ಲಿ ಮೋದಿ ಪ್ರಸ್ತಾಪಿಸಿದರು. ರಷ್ಯಾದ ಏಳಿಗೆಗಾಗಿ ನಿಮ್ಮ ಕುಟುಂಬ ತ್ಯಾಗ ಮಾಡಿದೆ. ನಿಮ್ಮ ಅಣ್ಣ ಹುತಾತ್ಮರಾಗಿದ್ದರು ಎಂದು ಪುಟಿನ್ ಉದ್ದೇಶಿಸಿ ಅವರು ಹೇಳಿದರು. ಏಳು ದಶಕಗಳಿಗೂ ಹಿಂದೆ ನಡೆದಿದ್ದ ಲೆನಿನ್ಗ್ರಾಡ್ ಒತ್ತೆ ಪ್ರಕರಣದಲ್ಲಿ ಪುಟಿನ್ ಸೋದರ ವಿಕ್ಟರ್ ಮೃತಪಟ್ಟಿದ್ದರು.
ಸುದ್ದಿಸಂಸ್ಥೆಯೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಪುಟಿನ್, ‘ಕ್ಷಿಪಣಿ ಸೇರಿದಂತೆ ಕೆಲವು ಸಂಕೀರ್ಣ ಕ್ಷೇತ್ರಗಳಲ್ಲಿ ರಷ್ಯಾ, ಭಾರತದೊಂದಿಗೆ ಹೊಂದಿರುವಷ್ಟು ಆಳವಾದ ಸಹಕಾರವನ್ನು ಬೇರೆ ಯಾವ ರಾಷ್ಟ್ರಗಳೊಂದಿಗೂ ಹೊಂದಿಲ್ಲ’ ಎಂದು ಹೇಳಿದರು. ಸೇನಾ ಕ್ಷೇತ್ರದಲ್ಲಿ ರಷ್ಯಾವು ಪಾಕ್ನೊಂದಿಗೆ ಪ್ರಬಲ ಸಂಬಂಧ ಹೊಂದಿಲ್ಲ ಎಂದೂ ಪುಟಿನ್ ಸ್ಪಷ್ಟಪಡಿಸಿದರು.

Related posts

Leave a Reply