Header Ads
Breaking News

ಪರಸ್ಪರ ಸಹಕಾರ ಮನೋಭಾವದಿಂದ ಅಭಿವೃದ್ಧಿ ಸಾಧ್ಯ : ಎಂಸಿಎಸ್ ಬ್ಯಾಂಕಿನಲ್ಲಿ ಪೇಜಾವರ ಶ್ರೀ ಅಭಿಪ್ರಾಯ

ಪರಸ್ಪರ ಸಹಕಾರ ಮನೋಭಾವದಿಂದ ಎತ್ತರಕ್ಕೆ ಬೆಳೆಯಲು ಸಾಧ್ಯವಿದೆ. ಅದೇ ರೀತಿ ಎಂಸಿಎಸ್ ಬ್ಯಾಂಕ್ ಕೂಡಾ ಸಮಾಜದ ಎಲ್ಲಾ ಸ್ತರದ ಮಂದಿಯ ಜೊತೆಗೆ ಬೆರೆತು ಸಮಾಜದ ಉನ್ನತಿಯ ಜತೆ ಜತೆಗೆ ತಾನು ಬೆಳೆದು ಕೃಷ್ಣನ ಸಂದೇಶವನ್ನು ಪಾಲಿಸುತ್ತಿದೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ನುಡಿದರು.

ಅವರು ಮೂಡುಬಿದಿರೆ ಎಂಸಿಎಸ್ ಬ್ಯಾಂಕ್‍ಗೆ ಭೇಟಿ ನೀಡಿ, ಬ್ಯಾಂಕ್ ನೀಲಾವರದ ಗೋಶಾಲೆಗೆ ನೀಡಿರುವ ರೂ 1ಲಕ್ಷ ದೇಣಿಗೆಯನ್ನು ಸ್ವೀಕರಿಸಿ ಆಶೀರ್ವಚನ ನೀಡಿದರು.

ಈ ವೇಳೆ ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಮಿಥುನ್ ರೈ, ಮೂಡಾ ಅಧ್ಯಕ್ಷ ಮೇಘನಾಥ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *