Header Ads
Header Ads
Header Ads
Breaking News

ಪರಿಶಿಷ್ಟ ಜಾತಿಗೆ ಶೇ.20ರಷ್ಟು ಮೀಸಲಾತಿ ನೀಡುವಂತೆ ಆಗ್ರಹ

ಪರಿಶಿಷ್ಟ ಜಾತಿಗೆ ಶೇಕಡಾ 20ರಷ್ಟು ಮೀಸಲಾತಿ ನೀಡುವಂತೆ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಘಟಕ ಆಗ್ರಹಿಸಿದೆ.

ಈ ಬಗ್ಗೆ ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸುಂದರ್ ಮಾಸ್ತರ್ ಜಸ್ಟೀಸ್ ನಾಗ ಮೋಹನ್ ದಾಸ್ ರವರು ಪೂರ್ಣವಾದ ವರದಿ ಸಲ್ಲಿಸುವ ಮೊದಲೇ ಸರ್ಕಾರ ಪರಿಶಿಷ್ಟ ಜಾತಿಯವರಿಗೆ ಈಗಿರುವ ಹದಿನೈದು ಶೇಕಡಾ ಮೀಸಲಾತಿಯನ್ನು ಪಂಗಡಕ್ಕೆ ಶೇ 3ರಿಂದ 7ಕ್ಕೆ ಏರಿಸಲು ಆದೇಶ ನೀಡಿರುವುದು ಅವೈಜ್ಞಾನಿಕ ಹಾಗೂ ಅಸಂವಿಧಾನಿಕವಾಗಿದೆ. ಪರಿಶಿಷ್ಟ ಜಾತಿಯವರ ಜನಸಂಖ್ಯೆಗೆ ಅನುಗುಣವಾಗಿ ಕೇವಲ 2 ಶೇಕಡಾ ಹೆಚ್ಚಿಸಿರುವುದು ಅನ್ಯಾಯವಾಗಿದೆ. ಆದ್ದರಿಂದ 2011 ಜನಗಣತಿ ಹಾಗೂ ಸದಾಶಿವ ಆಯೋಗ ವರದಿ ಹಾಗೂ 2020 ಜನಗಣತಿಯ ಪ್ರಕಾರ ಸಮೀಕ್ಷೆ ನಡೆಸಿದರೂ ಈ ವರ್ಗದಲ್ಲಿ ಜನಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಆದ್ದರಿಂದ ಈ ಏರಿಕೆಗೆ ಅನುಗುಣವಾಗಿ ಮೀಸಲಾತಿಯನ್ನು 20 ಶೇಕಡಾಕ್ಕೆ ಏರಿಸಬೇಕೆಂದು ಸುಂದರ್ ಮಾಸ್ತರ್ ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಸಂಚಾಲಕ ಶ್ಯಾಮರಾಜ ಬಿರ್ತಿ, ಪ್ರಧಾನ ಸಂಚಾಲಕ ಶಂಕರ್ ದಾಸ್, ಪರಮೇಶ್ವರ್ ಉಪ್ಪೂರು, ಮಂಜುನಾಥ್ ಬಾಳ್ಕುದ್ರು, ಶಿವಾನಂದ ಮೂಡುಬೆಟ್ಟು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *