Header Ads
Header Ads
Breaking News

ಪರಿಶಿಷ್ಟ ಜಾತಿಯ ಮಹಿಳೆಯರಿಬ್ಬರಿಗೆ ಅನ್ಯಾಯ:ಪುತ್ತೂರು

ಪರಿಶಿಷ್ಠ ಜಾತಿಯ ಮಹಿಳೆಯರಿಬ್ಬರಿಗೆ ೯೪ಸಿ ಯೋಜನೆಯಡಿ ಮಂಜೂರಾದ ಮನೆ ಜಾಗದ ಅಂಗಳಕ್ಕೆ ಮುಳ್ಳು ತಂತಿಯ ಬೇಲಿ ನಿರ್ಮಿಸಿ ಅನ್ಯಾಯ ಎಸಗಿರುವ ಮುಂಡೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ವರ್ಗಾವಣೆಗೊಳಿಸಬೇಕು ಎಂದು ಆಗ್ರಹಿಸಿ ಜೂ.11ರಂದು ದಲಿತ್ ಸೇವಾ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಅವರು ಎಚ್ಚರಿಸಿದರು.ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಶಿಷ್ಟ ಜಾತಿಗೆ ಸೇರಿದ ನಳಿನಿ ಮತ್ತು ರೂಪ ಎಂಬವರು ಕಳೆದ 15 ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ವಾಸ್ತವ್ಯವಿದ್ದಾರೆ. ಅವರಿಬ್ಬರಿಗೆ 94ಸಿಯಲ್ಲಿ ಮಂಜೂರಾದ ಜಾಗದಲ್ಲಿರುವ ಮನೆಯ ಅಂಗಳದಲ್ಲಿಯೇ ಮುಂಡೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಜಾತ ಅವರು ಜನರನ್ನು ಕರೆದುಕೊಂಡು ಬಂದು ಮುಳ್ಳು ತಂತಿ ಬೇಲಿ ಅಳವಡಿಸಿದ್ದಾರೆ. ಹೆಂಗಸರು ಮತ್ತು ಹೆಣ್ಣುಮಕ್ಕಳು ಇರುವ ನಳಿನಿ ಅವರ ಮನೆಯವರಿಗೆ ಶೌಚಾಲಯಕ್ಕೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೂಪಾ ಅವರ ಮನೆಯ ಅಂಗಳದಲ್ಲಿಯೇ ಅಡ್ಡವಾಗಿ ತಂತಿ ಬೇಲಿ ನಿರ್ಮಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದರು.

ಪಂಚಾಯಿತಿ ನಿವೇಶನ ಜಾಗವನ್ನು ಅತಿಕ್ರಮಿಸಿಕೊಂಡಿದ್ದಾರೆ ಎನ್ನುವ ಕಾರಣಕ್ಕಾಗಿ ಯಾವುದೇ ನೋಟೀಸು ನೀಡದೆ, ಬೇರೆ ಶೌಚಾಲಯ ವ್ಯವಸ್ಥೆಯನ್ನು ಮಾಡಿಕೊಳ್ಳಲೂ ಕೂಡ ಅವಕಾಶ ನೀಡದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ಏಕಾಏಕಿಯಾಗಿ ನಳಿನಿ ಮತ್ತು ರೂಪಾ ಅವರ ವಶದಲ್ಲಿದ್ದ ಜಾಗಕ್ಕೆ ತಂತಿ ಬೇಲಿ ನಿರ್ಮಿಸಿದ್ದಾರೆ .ಇಲ್ಲಿ ಇವರು ಮಾತ್ರವಲ್ಲದೆ ಹಲವಾರು ಮಂದಿ ಸರ್ಕಾರಿ ಜಾಗವನ್ನು ಅತಿಕ್ರಮಿಸಿಕೊಂಡಿದ್ದಾರೆ ಎಂದು ದೂರಿದ ಅವರು ಅಭಿವೃದ್ಧಿ ಅಧಿಕಾರಿಯವರು ಕಾನೂನು ಪ್ರಕಾರವೇ ನಡೆಯುವುದಾದರೆ ಅಲ್ಲಿನ ಎಲ್ಲಾ ಅತಿಕ್ರಮಣಗಳನ್ನು ತೆರವುಗೊಳಿಸಬೇಕು ಎಂದು ಸವಾಲು ಹಾಕಿದರು.ಜಿಲ್ಲಾ ದಲಿತ್ ಸೇವಾ ಸಮಿತಿಯ ಪುತ್ತೂರು ತಾಲ್ಲೂಕು ಶಾಖೆಯ ಅಧ್ಯಕ್ಷ ರಾಜು ಹೊಸ್ಮಠ, ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ಮೋಹನ ನಾಯ್ಕ, ಸಂತ್ರಸ್ಥ ಮಹಿಳೆಯರಾದ ನಳಿನಿ ಮತ್ತು ರೂಪಾ ಅವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. 

 

Related posts

Leave a Reply