Header Ads
Header Ads
Header Ads
Breaking News

ಪರಿಶಿಷ್ಠ ಜಾತಿ, ಪಂಗಡದ ಯೋಜನೆ ಅನುಷ್ಠಾನ ಭಟ್ಕಳದಲ್ಲಿ ಪ್ರಗತಿ ಪರಿಶೀಲನಾ ಸಭೆ ಪೊಲೀಸ್ ಅಧೀಕ್ಷಕ ವೇದಮೂರ್ತಿ ನೇತೃತ್ವದಲ್ಲಿ ಸಭೆ

ಮಂಗಳೂರಿನ ನಾಗರಿಕ ಹಕ್ಕು ಜ್ಯಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕ ಡಾ. ಸಿ ಬಿ ವೇದಮೂರ್ತಿ ಅವರು ಭಟ್ಕಳ ತಾ.ಪಂ. ಸಭಾಭವನದಲ್ಲಿ ಸರಕಾರದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅನುಷ್ಟಾನಗೊಳಿಸಲಾದ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಸಭೆಯಲ್ಲಿ ದಲಿತ ಮುಖಂಡ ನಾರಾಯಣ ಶಿರೂರು ಮಾತನಾಡಿ, ಕಳೆದ ಹದಿನೈದು ವರ್ಷಗಳಿಂದ ನೈಜ ಪರಿಶಿಷ್ಟರಿಗೆ ಸರಕಾರದ ಯೋಜನೆಗಳು ಸಿಗುತ್ತಿಲ್ಲ. ನೈಜಪರಿಶಿಷ್ಟರಲ್ಲದವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಸರಕಾರದ ಯೋಜನೆಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದಾಗ ಇದಕ್ಕೆ ಉಪಸ್ಥಿತರಿದ್ದ ಬೆಳಕೆಯ ಭಾಸ್ಕರ ಮೊಗೇರ, ಶ್ರೀಧರ ಮೊಗೇರ, ನಾಗರಾಜ ಈ ಹೆಚ್ ಮುಂತಾದವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೆಲಕಾಲ ಸಭೆಯಲ್ಲಿ ಗೊಂದಲ ವಾತಾವರಣ ಉಂಟಾಗಿ ಕೊನೆಗೆ ಎಲ್ಲರನ್ನೂ ಜ್ಯಾರಿ ನಿರ್ದೇಶನಾಲಯದ ವೇದಮೂರ್ತಿ ಹಾಗೂ ಡಿವೈ‌ಎಸ್ಪಿ ಶಿವಕುಮಾರ, ಮೊಗೇರ ಸಮಾಜದ ಅಧ್ಯಕ್ಷ ಕೆ ಎಂ ಕರ್ಕಿ ಮುಂತಾದವರು ಸಮಾಧಾನಿಸಿ ಸಭೆ ಸಸೂತ್ರವಾಗಿ ಮುಂದುವರಿಯುವಂತೆ ಮಾಡಿದರು.

ಸಾರ್ವಜನಿಕರ ಅಹವಾಲು ಸ್ವೀಕರಿಸಿ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿದ ಜ್ಯಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕ ಸಿ ಬಿ ವೇದಮೂರ್ತಿ, “ಸರಕಾರದಿಂದ ಮಂಜೂರಾದ ಯೋಜನೆಗಳು ಸಮರ್ಪಕವಾಗಿ ಎಸ್ಸಿ ಎಸ್ಟಿ ಸಮುದಾಯದವರಿಗೆ ಸಿಗುವಂತಾಗಬೇಕು. ಯೋಜನೆ ದುರುಪಯೋಗವಾದಲ್ಲಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ ವಿ ಎನ್ ಬಾಡ್ಕರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿ ಟಿ ನಾಯ್ಕ, ಸಮಾಜ ಕಲ್ಯಾಣ ಇಲಾಖೆಯ ವಿನಾಯಕ ಮುಂತಾದವರಿದ್ದರು.

ವರದಿ: ರಾಘವೆಂದ್ರ ಮಲ್ಯ ಭಟ್ಕಳ.

Related posts

Leave a Reply