Header Ads
Header Ads
Breaking News

ಪರಿಸರವಿರೋಧಿ ಮನುಷ್ಯ ನಡೆಯಿಂದ ಅಪಾಯ: ಸೇನಾನಿ

ಉಜಿರೆ.ಆ.29 :ವನ್ಯಜೀವಿಗಳು ನಾಡಿನೊಳಗೆ ಕಾಣಿಸಿಕೊಳ್ಳುತ್ತಿರುವುದು ಪರಿಸರವಿರೋಧಿಅಭಿವೃದ್ಧಿಯ ನಕಾರಾತ್ಮಕ ಸಂಕೇತಎಂದು ಹಸಿರು ಆಸ್ಕರ್‍ಖ್ಯಾತಿಯ ವನ್ಯಜೀವಿ ಸಾಕ್ಷ್ಯಚಿತ್ರ ನಿರ್ದೇಶಕ ಸೇನಾನಿ ನುಡಿದರುಎಸ್.ಡಿ.ಎಂ.ಪದವಿ ಕಾಲೇಜಿನ ಸಮ್ಯಗ್ದರ್ಶನ ಸಭಾಭವನದಲ್ಲಿಇಂಗ್ಲೀಷ್ ವಿಭಾಗ ಆಯೋಜಿಸಿದ ‘ವಾಕಿಂಗ್ ವಿತ್ ವೂಲ್ಪ್ಸ್’ವನ್ಯಜೀವಿ ಸಾಕ್ಷ್ಯಚಿತ್ರ ಪ್ರದರ್ಶನದ ನಂತರ ನಡೆದ ಸಂವಾದಕಾರ್ಯಕ್ರಮದಲ್ಲಿ ಮಾತನಾಡಿದರು.

ಅಭಿವೃದ್ಧಿಯ ಹೆಸರಿನಲ್ಲಿ ಕಾಡುಗಳು ಮರೆಯಾಗುತ್ತಿವೆ. ತಮಿಳುನಾಡಿನವಾಲ್ಪರೈನಲ್ಲಿ ನೆಲಮುಟ್ಟದೆ ಮರದಿಂದ ಮರಕ್ಕೆ ಹಾರಿಕೊಂಡುತಿರುಗುತ್ತಿದ್ದ ಸಿಂಹಬಾಲದ ಕೋತಿಗಳು, ಈಗ ರಸ್ತೆಯ ಬದಿಯಲ್ಲಿ ಕಾಣಸಿಗುತ್ತಿವೆ, ಇದು ನಿಜವಾದಅಭಿವೃದ್ಧಿಯಲ್ಲಎಂದುಅಭಿಪ್ರಾಯಪಟ್ಟರು.ಇತರ ಜೀವಿಗಳನ್ನು ಕೀಳರಿಮೆಯಿಂದ ಕಾಣಬಾರದು, ಮಾನವಕೂಡಜೀವ ಸಂಕುಲದಒಂದು ಭಾಗ.ಯಾವುದೇಒಂದು ಪ್ರಾಣಿ ಸ್ವಚ್ಛಂದವಾಗಿಜೀವಿಸುವುದಕ್ಕೆಅವಕಾಶವಿರಬೇಕು.ಅವುಗಳ ಅಸ್ತಿತ್ವಕ್ಕೆ ಧಕ್ಕೆಯಾಗದ ಹಾಗೆ ಮನುಷ್ಯಎಚ್ಚರವಹಿಸಬೇಕು ಎಂದು ನುಡಿದರು.

ಸಂಶೋಧನೆಯಿಂದಮಾತ್ರಆಯ್ದಕಥಾವಸ್ತುವನ್ನು ಪರಿಪೂರ್ಣ ಸಾಕ್ಷ್ಯಚಿತ್ರವನ್ನಾಗಿಕಟ್ಟಿಕೊಡಲು ಸಾಧ್ಯಎಂದು ತಿಳಿಸಿದರು.
ಧರ್ಮ ಮಾನವರೂಪಿತ ವಿಷಯ.ಧರ್ಮದ ಪರಿಪೂರ್ಣ ತಿಳುವಳಿಕೆಯೊಂದಿಗೆ ಒಂದುಗಣನೀಯ ಬದಲಾವಣೆತರಲು ಸಾಧ್ಯ.ನಂಬಿಕೆ, ವಿಜ್ಞಾನ, ಆಚರಣೆನಡುವಿನ ವ್ಯತ್ಯಾಸ ತಿಳಿದು ನಡೆಯಬೇಕು.ಇಂದಿನ ಯುವಜನತೆ ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಂಡು ಪರಿಸರಸಂಬಂಧಿತ ಸಂಶೋಧನಾತ್ಮಕ ವರದಿಯನ್ನು ಓದಿಕೊಳ್ಳಬೇಕು ಎಂದುಅಭಿಪ್ರಾಯಪಟ್ಟರು.

ನೈರ್ಸಗಿಕ ವಿಕೋಪವನ್ನುರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ, ಯಾವುದೇ ವಿಚಾರವನ್ಮುಅಧ್ಯಯನ ನಡೆಸದೆ ನಿರ್ದಾರ ತೆಗೆದುಕೊಳ್ಳಬಾರದು ಎಂದು ನಾಗರಹೊಳೆ ಅಭಯಾರಣ್ಯದವನ್ಯಜೀವಿ ಪಾಲಕರಾದಎಸ್.ಎಸ್. ಸುನೀಲ್ ತಿಳಿಸಿದರು.
ಕಾರ್ಯಕ್ರಮದಲ್ಲಿಕಾಲೇಜಿನ ಪ್ರಾಂಶುಪಾಲ ಪ್ರೊ.ಸತೀಶ್‍ಚಂದ್ರ,ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಡಾ.ಶಂಕರ್‍ನಾರಾಯಣ್‍ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನುತೃತೀಯ ಪದವಿಯ ವಿದ್ಯಾರ್ಥಿಕೌಸ್ತುಭ ಮತ್ತು ಭಾರ್ಗವಿ ನಿರೂಪಿಸಿದರು.ದ್ವಿತೀಯ ಪದವಿಯ ವಿದ್ಯಾರ್ಥಿ ರಶ್ಮಿ ವಂದನಾರ್ಪಣೆ ನೆರವೆರಿಸಿದರು.

Related posts

Leave a Reply

Your email address will not be published. Required fields are marked *