Header Ads
Breaking News

ಪರಿಸರಾಸಕ್ತ, ಸೇವಾದಳ ಸುರೇಶ್ ಶೆಟ್ಟಿ ನಿಧನ

ಮಂಗಳೂರಿನ ಪರಿಚಿತ ಪರಿಸರ ಕಾರ್ಯಕರ್ತ, ಸೇವಾದಳ ಸಂಘಟಕ ಲಯನ್ ಸುರೇಶ್ ಶೆಟ್ಟಿ ಹೃದಯಾಘಾತದಿಂದ ಶನಿವಾರ ನಿಧನರಾಗಿದ್ದಾರೆ. ಅರಿಗೆ 72 ವರ್ಷ ವಯಸ್ಸಾಗಿತ್ತು. ಮಂಗಳೂರಿನ ಜೆಪ್ಪು ಮಾರ್ಕೆಟ್ ರೋಡ್ ಗರೋಡಿ ಕಂಪೌಂಡ್ ನಿವಾಸಿಯಾಗಿದ್ದ ಸುರೇಶ್ ಶೆಟ್ಟಿ ಅವರು ರೆಡ್ ಕ್ರಾಸ್ ಸಂಸ್ಥೆ, ಭಾರತ ಸೇವಾದಳ, ರಾನಮಕೃಷ್ಣ ಆಶ್ರಮ ಸ್ವಚ್ಛತಾ ಆಂದೋಲನ, ಮಂಗಳೂರು ಮಹಾನಗರಪಾಲಿಕೆ ಮಲೇರಿಯಾ ಜಾಗೃತಿ, ಪರಿಸರಾಸಕ್ತರ ಒಕ್ಕೂಟದ ಸಕ್ರಿಯ ಕಾರ್ಯಕರ್ತರಾಗಿದ್ದರು. ವೃತ್ತಿಯಲ್ಲಿ ಭಾರತೀಯ ಜೀವ ವಿಮಾ ಏಜೆಂಟ್ ಆಗಿದ್ದು, ಸದಾ ಸಮಾಜ ಸೇವೆಯಲ್ಲಿ ನಿರತರಾಗಿದ್ದರು. ಎರಡು ಬಾರಿ ಯುವ ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷರಾಗಿದ್ದ ಸುರೇಶ್ ಶೆಟ್ಟಿ, ಸೇವಾದಳ ಸಂಘಟಕರಾಗಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಪದಾಧಿಕಾರಿಯಾಗಿ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು.
ಅವರು ಮಡದಿ, ಇಬ್ಬರು ಮಕ್ಕಳು, ಮೊಮ್ಮಕ್ಕಳು ಮತ್ತು ಅಪಾರ ಸ್ನೇಹಿತರನ್ನು ಅಗಲಿದ್ದಾರೆ.ಕುಟುಂಬದ ಜತೆಯಾಗಿ ವಿಹಾರಕ್ಕೆ ತೆರಳಿದ್ದಾಗ ದುರ್ಘಟನೆ ಸಂಭವಿಸಿದ್ದು, ಅನಂತರ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Related posts

Leave a Reply

Your email address will not be published. Required fields are marked *