Header Ads
Header Ads
Breaking News

ಪರಿಸರ ಮಾಲಿನ್ಯ ಹಾಗೂ ರಸ್ತೆ ಸುರಕ್ಷತಾ ಕುರಿತು ಸಂವಾದ ಕಾರ್ಯಕ್ರಮ

ಪುತ್ತೂರು : ಪುತ್ತೂರು ಸಂಚಾರ ಪೊಲೀಸ್ ಠಾಣೆ ವತಿಯಿಂದ ಪುತ್ತೂರು ನಗರದಲ್ಲಿ ಸಂಚಾರ ದಟ್ಟಣಿ ಮತ್ತು ಪರಿಸರ ಮಾಲಿನ್ಯ ಹಾಗೂ ರಸ್ತೆ ಸುರಕ್ಷತಾ ಕುರಿತು ಅಧ್ಯಯನ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ನಗರ ಪೊಲೀಸ್ ಠಾಣಾ ನಿರೀಕ್ಷಕ ಮಹೇಶ್ ಪ್ರಸಾದ್, ಈಗಾಗಲೇ ರಸ್ತೆ ಸುರಕ್ಷತೆ ಕುರಿತುಸಾರ್ವಜನಿಕರೊಂದಿಗೆ ಸಂವಾದ ನಡೆಸಬೇಕು ಎಂಬ ಸುತ್ತೋಲೆ ಸರಕಾರದಿಂದ ಬಂದಿದ್ದು, ಈ ನಿಟ್ಟಿನಲ್ಲಿ ಮಂಗಳೂರು, ಬೆಂಗಳೂರಿನಲ್ಲೂ ಇಂತಹಾ ಕಾರ್ಯಕ್ರಮಗಳು ನಡೆಯುತ್ತಿದೆ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪುತ್ತೂರು ನಗರ ಅಭಿವೃದ್ಧಿ ಜತೆಗೆ ವಾಹನಗಳ ಸಂಖ್ಯೆ ಏರುತ್ತಿದೆ. ಇದು ವಾಹನ ಟ್ರಾಫಿಕ್ ಜ್ಯಾಮ್‌ಗೂ ಕಾರಣವಾಗುತ್ತಿದೆ ಎಂದರು.ನಗರಸಭಾ ಸದಸ್ಯ ಬಾಲಚಂದ್ರ ಮಾತನಾಡಿ, ಅಗಲ ಕಿರಿದಾದ ರಸ್ತೆಯಿಂದಾಗಿ ವಾಹನ ದಟ್ಟಣಿ ಆಗುತ್ತಿದೆ. ೨೦೦೬ ರಲ್ಲಿ ನಗರ ಯೋಜನಾ ಪ್ರಾಧಿಕಾರ ಪುತ್ತೂರಿಗೆ ಬಂದ ಬಳಿಕದ ದಿನಗಳಲ್ಲಿ ಪಾರ್ಕಿಂಗ್ ಬಿಟ್ಟು ಕಟ್ಟಡವನ್ನು ರಚಿಸಲಾಗಿದೆ. ಬಹುತೇಕ ಜಾಗ ವರ್ಗ ಜಾಗವಾದ್ದರಿಂದ ರಸ್ತೆ ಅಗಲೀಕರಣಗೊಳಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ.

ಈ ನಿಟ್ಟಿನಲ್ಲಿ ಸಿಗಬಹುದಾದ ಜಾಗದಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಜತೆಗೆ ಸಂಚಾರಿ ನಿಯಮದಲ್ಲಿ ಕಾನೂನು ರೀತಿಯ ಬದಲಾವಣೆಗಳನ್ನು ತರಬೇಕಾಗಿದೆ ಎಂದರು.ಬಳಿಕ ವರ್ತಕರೊಂದಿಗೆ ಸಂವಾದ ನಡೆಯಿತು. ವರ್ತಕರ ಕೆಲವೊಂದು ಸಮಸ್ಯೆಗಳನ್ನು ಆಲಿಸಿದ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಉತ್ತರ ನೀಡಿದರು. ಈ ಕುರಿತು ಕ್ರಮಕೈಗೊಳ್ಳುವ ಭರವಸೆ ನೀಡಿದರು.ವೇದಿಕೆಯಲ್ಲಿ ಸಂಚಾರಿ ಠಾಣಾ ಎಸ್‌ಐ ನಾರಾಯಣ ರೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಗರ ಠಾಣಾ, ಸಂಚಾರಿ ಠಾಣಾ, ಮಹಿಳಾ ಠಾಣಾ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Related posts

Leave a Reply