Header Ads
Header Ads
Header Ads
Breaking News

ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸುಳ್ಯದ ಎರಡು ಗ್ರಾಮಗಳು ಸೇರ್ಪಡೆ ವಿರೋಧಿಸಿ ಗ್ರಾಮಸ್ಥರಿಂದ ಅಧಿಕಾರಿಗಳಿಗೆ ದಿಗ್ಬಂಧನ

 

ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸುಳ್ಯದ ಎರಡು ಗ್ರಾಮಗಳ ಸೇರ್ಪಡೆ ವಿರೋಧಿಸಿ ವನ್ಯಜೀವಿ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ದಿಗ್ಬಂಧನ ವಿಧಿಸಿದ ಘಟನೆ ಸುಳ್ಯದ ಬಾಳುಗೋಡಿನಲ್ಲಿ ನಡೆದಿದೆ.
ಸೋಮವಾರಪೇಟೆ ಪುಷ್ಪಗಿರಿ ಇಲಾಖೆಯ ವಲಯ ಅರಣ್ಯಾಧಿಕಾರಿ ಮರಿಸ್ವಾಮಿ ನೇತೃತ್ವದ 6 ಮಂದಿಯ ತಂಡ ಹರಿಹರ ಮಾರ್ಗವಾಗಿ ಆಗಮಿಸಿತು. ಈ ವೇಳೆ ಗ್ರಾಮಸ್ಥರು ಅತ್ತ ತೆರಳಿದರೆ ಸಮಸ್ಯೆಯಾದಿತು ಎಂದು ಎಚ್ಚರಿಸಿದರು. ಆದರೂ ತಂಡ ವಾಹನದಲ್ಲಿ ಕುಡುಮುಂಡೂರು ಮೂಲಕ ಮಾರಿಗುಂಡಿಗೆ ತೆರಳಲೆತ್ನಿಸಿದರು. ಈ ವೇಳೆ ಪ್ರಣ್ ಕೆದಿಲ ಎಂಬವರು ಅತ್ತ ತೆರಳದಂತೆ ಮನವಿ ಮಾಡಿದರಾದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರು. ಈ ವೇಳೆ ವಿಷಯ ತಿಳಿದ 5 ಗ್ರಾಮಗಳ ಜನತೆ ಜಮಾಯಿಸಿ ವಾಹನ ಚಕ್ರದ ಗಾಳಿ ತೆಗೆದರು. 2 ಕಿ.ಮೀ. ಅಂದಾಜು ದೂರದ ಅರಣ್ಯದಂಚಿನ ಶೆಡ್‌ಗೆ ತೆರಳಿ ಹಿಂದಿರುಗಿದಾಗ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡರು.

 

ಅಽಕಾರಿಗಳೊಂದಿಗೆ ಗ್ರಾಮಸ್ಥರು ಯೋಜನೆ ವಿರುದ್ಧ ಹಿಂದೆ ಪ್ರತಿಭಟನೆ ಮೂಲಕ ತಮ್ಮ ವಿರೋ‘ ತೋರಿಸಿದ್ದೆವು. ಅಲ್ಲದೇ ಹಿಂದೆ ಹರಿಹರದಲ್ಲಿ ನಡೆದಿದ್ದ ಸಮಾಲೋಚನಾ ಸಭೆಯಲ್ಲಿ ಅಸ್ಪಷ್ಪ ಉತ್ತರ ನೀಡಿದ್ದರಿಂದ ಸಮಸ್ಯೆ ಇತ್ಯರ್ಥವಾಗುವರೆಗೂ ಇತ್ತ ತೆರಳದಂತೆ ಎಚ್ಚರಿಸಿದೆವು. ಆದರೂ ಆಗಮಿಸಿದರಿಂದ ವಾಪಾಸ್ ಹೋಗಲು ಅವಕಾಶ ನೀಡುವುದಿಲ್ಲ. ತಮ್ಮ ನಿರ್ಧಾರ ತಿಳಿಸುವಂತೆ ಪಟ್ಟು ಹಿಡಿದರು.

ಕೊನೆಗೆ ರೇಂಜರ್ ಮರಿಸ್ವಾಮಿ ಇನ್ಮುಂದೆ ಇತ್ತ ಆಗಮಿಸುವುದಿಲ್ಲ ಎಂದು ತಿಳಿಸುವುದರೊಂದಿಗೆ ದಿಗ್ಬಂಧನ ಹಿಂದೆತೆಗೆದುಕೊಳ್ಳಲಾಯಿತು. ಬಳಿಕ ಪಂಕ್ಚರ್‌ಗೊಂಡ ವಾಹನವನ್ನು ಗ್ರಾಮಸ್ಥರೇ ಸ್ವತ ಸರಿಪಡಿಸಿ ತೆರಳಲು ಅವಕಾಶ ಮಾಡಿಕೊಟ್ಟರು.

ಮಹಿಳೆಯರ ಸಹಿತ ಸಾವಿರಕ್ಕೂ ಅಧಿಕ ಮಂದಿ ಜಮಾಯಿಸಿದ್ದರು.

 

Related posts

Leave a Reply