Header Ads
Header Ads
Header Ads
Breaking News

ಪರಿಸರ ಸ್ನೇಹಿ ತಂಡದ ವತಿಯಿಂದ ಹಸಿದವರಿಗೆ ಅನ್ನ ಎಂಬ ವಿನೂತನ ಕಾರ್ಯಕ್ರಮ

ಶ್ರೀ ಸಾಯಿ ಸಾಗರ್ ಫೌಂಡೇಶನ್ (ರಿ) ಪ್ರವರ್ತಿತ “ಪರಿಸರ ಸ್ನೇಹಿ ತಂಡದ ವತಿಯಿಂದ ಹಸಿದವರಿಗೆ ಅನ್ನ” ಎಂಬ ಕಾರ್ಯಕ್ರಮವನ್ನು ನಡೆಸಿದ್ದು ಮಿಲಗ್ರಿಸ್ ಚರ್ಚ್‌ನಿಂದ ರೈಲ್ವೆ  ಸ್ಟೇಷನ್ ವರೆಗೆ ನಡೆದು ಹಸಿವಿನಿಂದ ಕುಳಿತಿದ್ದ ಎಲ್ಲರಿಗೂ ಊಟವನ್ನು ನೀಡಿದ್ದಾರೆ. ತನಿಶ ಆಚಾರ್ಯ ಹಾಗೂ ಸುಹಾನಿ ಪ್ರಭು ನೇತೃತ್ವದ ಈ ತಂಡ ವೈಷ್ಣವಿ, ಶಮಿತ್, ಮಹಿತ್, ವಾರುಣಿ, ವರ್ಷಿಣಿ, ಯವರನ್ನು ಸೇರಿಸಿಕೊಂಡು ಈ ಕೆಲಸ ಯಶಸ್ವಿಗೊಳಿಸಿದ್ದಾರೆ. ಯಾವುದೇ ತಂಡಕ್ಕೆ ಒಂದು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ತಮ್ಮ ಸುತ್ತ ಮುತ್ತಲಿನವರ ಸಹಕಾರ ಅತ್ಯಗತ್ಯ . ಪರಿಸರ ಸ್ನೇಹಿ ತಂಡಕ್ಕೆ ಇಂದು ಸಹಕಾರ ನೀಡಿದ್ದು ಪೀಸ್ ಲ್ಯಾಂಡ್ ಅಪಾಟ್ಮೆಂಟ್ ನ ಸಹೃದಯಿ ಬಂಧುಗಳು. ತನಿಶ ಹಾಗೂ ಸುಹಾನಿಯವರು ತಿಳಿಸಿದಂತೆ ಪ್ರತಿಯೊಂದು ಮನೆಯವರೂ ಸಹ ಪ್ಲಾಸ್ಟಿಕ್ ಬಳಸದೆ ಬಾಳೆ ಎಲೆಯಲ್ಲಿ ಆಹಾರವನ್ನು ಕಟ್ಟಿಕೊಟ್ಟು ಮಕ್ಕಳ ಪ್ರೀತಿಗೆ ಪಾತ್ರರಾಗಿದ್ದಾರೆ. ಶ್ರೀ ಸಾಯಿ ಸಾಗರ್ ಫೌಂಡೇಶನ್(ರಿ) ಯ ಸಂಸ್ಥಾಪಕರಾದ ಪ್ರೀತಂ ಸಾಗರ್ ಹಾಗೂ ಟ್ರಸ್ಟಿಯಾದ ಪವಿತ್ರ ಆಚಾರ್ಯ ರವರು ಪೀಸ್ ಲ್ಯಾಂಡ್ ನ ಸಮಸ್ತ ಬಂಧುಗಳಿಗೆ ಅಭಾರಿಯಾಗಿರುತ್ತಾರೆ. ಹಾಗೂ ಪರಿಸರ ಸ್ನೇಹಿ ತಂಡಕ್ಕೆ ಎಂದಿಗೂ ಬೆನ್ನೆಲುಬಾಗಿ ನಿಲ್ಲುವ ಭರವಸೆ ನೀಡಿದ್ರು.

Related posts

Leave a Reply

Your email address will not be published. Required fields are marked *