Header Ads
Breaking News

ಪರಿಸರ ಸ್ನೇಹಿ ಸ್ನೇಹಿತರ ದಿನಾಚರಣೆ. ವಿನೂತನವಾಗಿ ಸ್ನೇಹಿತರ ದಿನಾಚರಣೆ ಆಚರಿಸಿದ ಸ್ನೇಹಿತರು.

ಉಡುಪಿ ಪರಿಸರ ಪ್ರೇಮಿ ಗೆಳೆಯರ ಬಳಗವು ಸಾರ್ವಜನಿಕ ಸ್ಥಳಗಳಲ್ಲಿ ಸಾಲು ಮರಗಳಾಗಲು, ಗಿಡಗಳ ನೆಟ್ಟು, ಹಾಗೂ ಪರಿಸರ ಆಸಕ್ತರಿಗೆ ಗಿಡಗಳ ಊಡುಗೊರೆ ನೀಡುವ ಮೂಲಕ ವಿನೂತನ ರೀತಿಯಲ್ಲಿ ಸ್ನೇಹಿತರ ದಿನಾಚರಣೆಯನ್ನು ಪರಿಸರ ಸ್ನೇಹಿಯಾಗಿ ಆಚರಿಸಿ ಮಾದರಿಯಾದರು.ಸದಾ ಪರಿಸರದ ರಕ್ಷಣೆಯಲ್ಲಿ ನಿರತರಾಗಿರುವ ಉಡುಪಿಯ ಸಮಮನಸ್ಸಿನ ಗೆಳೆಯರ ತಂಡವು, ಉಡುಪಿ ನಗರದ ಹೊರ ವಲಯದಲ್ಲಿ ಇರುವ, ಕುಂಜಿಬೆಟ್ಟು ಶಾರದನಗರ ರಸ್ತೆಯ ಪಕ್ಕದಲ್ಲಿ ಮಲೇಷ್ಯಾ ಮೂಲದ ಬ್ರಹ್ಮಪರ್ಣ ಬೇವಿನ, ಆರು ಅಡಿ ಎತ್ತರದ ಔಷಧಿಯ ಗಿಡಗಳನ್ನು ನೆಟ್ಟು, ಸ್ನೇಹಿತರ ದಿನಾಚರಣೆ ಆಚರಿಸಿ ಸಂಭ್ರಮಿಸಿದರು.ಸ್ನೇಹಿತರ ದಿನಾಚರಣೆಯ, ಸಂಭ್ರಮದ ಕೂಟದಲ್ಲಿ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ವಿನಯಚಂದ್ರ ಆಚಾರ್ಯ, ಪತ್ರಕರ್ತರಾದ ಸಂತೋಷ್ ಸರಳಬೆಟ್ಟು, ಶ್ರೀಮತಿ ಪಲ್ಲವಿ ಸಂತೋಷ್, ಹಾಗೂ ಮಂಡಲ ಪಂಚಾಯತ್ ಮಾಜಿ ಸದಸ್ಯ ಸುರೇಶ್ ಕೆ, ಉಮೇಶ್ ಬೈಲೂರು, ಉಡುಪಿ ಜರ್ನಾಧನ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply