Header Ads
Header Ads
Breaking News

ಪರಿಹಾರ ಕಾಣದ ಜೋಡುಪಾಲ ನಿರಾಶ್ರಿತರ ಸಮಸ್ಯೆ

ಸುಳ್ಯ : ಜೋಡುಪಾಲ ಪ್ರಕೃತಿ ವಿಕೋಪ ಸಂಭವಿಸಿ ಮೂರು ತಿಂಗಳು ತುಂಬುತ್ತಿದ್ದರೂ ನಿರಾಶ್ರಿತರು ತಮ್ಮ ಮೂಲಭೂತ ವ್ಯವಸ್ಥೆಗೆ ಸರಕಾರ ಯಾವುದೇ ಅಧಿಕೃತವಾಗಿ ಕ್ರಮ ಕೈಗೊಳ್ಳದಿರುವುದರಿಂದ ಪುನರ್ ವಸತಿ ಕೇಂದ್ರದಲ್ಲಿ ವಾಸವಾಗಿದ್ದ ಕೆಲ ಜನರು ಗುಳೆ ಹೊರಟಿದ್ದು ಇನ್ನೂ ಕೆಲವರು ಮಾನಸಿಕ ನೆಮ್ಮದಿ ಕಳಕೊಂಡು ಜೀವನ ಕಳೆಯುವಂತಾಗಿದೆ.ಕೊಡಗು ಸಂಪಾಜೆ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಈಗ 24 ಕುಟುಂಬಗಳು ವಾಸವಿದ್ದು 73 ಜನರಿದ್ದಾರೆ. ಇವರಲ್ಲಿ 13 ಮಂದಿ ಶಾಲಾ ಮಕ್ಕಳಿದ್ದಾರೆ. ದಕ್ಷಿಣ ಕನ್ನಡ ಸಂಪಾಜೆ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ 11 ಕುಟುಂಬಗಳು ವಾಸ ಇದ್ದು 42 ಜನರಿದ್ದಾರೆ. ಇವರಲ್ಲಿ 9 ಮಂದಿ ಶಾಲಾ ಮಕ್ಕಳಿದ್ದಾರೆ. ಒಬ್ಬರು ಅನಾರೋಗ್ಯಕ್ಕೀಡಾದ 80 ವರ್ಷ ಪ್ರಾಯದ ವೃದ್ದೆ.
ಸುಮಾರು ಒಂದುವರೆ ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅವರು ನಿರಾಶ್ರಿತರ ಕೇಂದ್ರಕ್ಕೆ ಆಗಮಿಸಿದ ಸಂದರ್ಭದಲ್ಲಿ ನಿರಾಶ್ರಿತರು ತಮಗೆ ಉಚಿತ ಪಾಸ್ ನೀಡಬೇಕೆಂದು ಒತ್ತಾಯಿಸಿದ ಹಿನ್ನಲೆಯಲ್ಲಿ ಸಚಿವರು ನಿರಾಶ್ರಿತರಿಗೆ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಸಂಚರಿಸಲು ಉಚಿತ ಪಾಸ್‍ನ ವ್ಯವಸ್ಥೆ ಮಾಡಿದ್ದರು. ಒಂದು ತಿಂಗಳು ನಿರಾಶ್ರಿತರು ಉಚಿತವಾಗಿ ಬಸ್ಸಿನಲಿ ಪ್ರಯಾಣ ಮಾಡಿದ್ದಾರೆ.
ಸರಕಾರ ನೀಡಿದ ಹಣ ಎಷ್ಟು ?
ಪ್ರಥಮ ಅವಧಿಯಲ್ಲಿ ನಿರಾಶ್ರಿತರ ಪ್ರತಿ ಕುಟುಂಬಕ್ಕೆ ಸರಕಾರ 3,800 ರೂಪಾಯಿಗಳನ್ನು ನೀಡಿದೆ. ಸಂಪೂರ್ಣ ಮನೆ ಕಳಕೊಂಡ ಕುಟುಂಬಕ್ಕೆ 1,01900 ರೂಪಾಯಿ ಹಣ ನೀಡಿದೆ. ಹಾನಿಗೊಳಗಾದ ಮನೆಗಳಿಗೆ ಹಾನಿಗಳಿಗೆ ಅನುಸರಾವಾಗಿ ಪರಿಹಾರ ನೀಡಿದೆ. ಇದು ಕೆಲವರಿಗೆ ದೊರೆತ್ತಿಲ್ಲ. ಇನ್ನೂ ಕೆಲವರಿಗೆ ಪರಿಹಾರ ದೊರೆಯಲಿದೆ ಎಂಬ ಮಾಹಿತಿ ಇದೆ. ಮನೆ ಮತ್ತು ಜಮೀನಿನ ಬಗ್ಗೆ ದಾಖಲೆ ಇಲ್ಲದವರಿಗೆ ಪರಿಹಾರ ದೊರೆಯುತ್ತದೆಯೇ ಇಲ್ಲವೆ ಎಂಬ ಗೊಂದಲ ಇದೆ. ಮನೆ ಮತ್ತು ಜಮೀನ ಬಗ್ಗೆ ದಾಖಲೆ ಇಲ್ಲದ ನಿರಾಶ್ರಿತರು ಕೊಡಗು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ತಮಗೂ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಪರಿಹಾರ ಕೇಂದ್ರಕ್ಕೆ ಕೊಂಡು ಹೋದ ಜೀನಿಸಿ ಸಾಮಾನುಗಳಿಗ ಕಲ್ಲುಗುಂಡಿ ಅಂಗಡಿಯೊಂದಕ್ಕೆ ಸುಮಾರು 50 ಸಾವಿರಕ್ಕೂ ಅಧಿಕ ಹಣ ನೀಡಲು ಬಾಕಿ ಉಳಿದಿದ್ದು ಅದನ್ನು ಕೊಡಗು ಜಿಲ್ಲಾಡಳಿತ ನೀಡಿಲ್ಲ.
ನಿರಾಶ್ರಿತರಿಗೆ ಪರಿಹಾರ ಕೇಂದ್ರ ಊಟಕ್ಕೆ ಹಾಗೂ ಇತರ ತಿನಿಸಿಗೆ ಯಾವುದೇ ಬರ ಎದುರಾಗಿಲ್ಲ. ಅಕ್ಕಿ, ಬಟ್ಟೆ ಹೀಗೆ ಎಲ್ಲಾ ಮೂಲಭೂತ ವಸ್ತುಗಳಿವೆ.
ನಿರಾಶ್ರಿತರಿಗೆ ಮನೆ ಕಟ್ಟಲು ಈಗಾಗಲೇ ಕೊಡಗು ಸಂಪಾಜೆ ಶಾಲಾ ಬಳಿ ಒಂದುವರೆ ಏಕ್ರೆ ಮತ್ತು ಮದೆನಾಡು ಸಮೀಪದ ಗೋಳಿಕಟ್ಟೆ ಎಂಬಲ್ಲಿ 5 ಏಕ್ರೆ ಜಾಗ ಗುರುತಿಸಲಾಗಿದೆ.

ನಮಗೆ ಸಂಪಾಜೆ ಭಾಗದಲ್ಲಿ ಮನೆ ಕಟ್ಟಲು ಜಾಗ ನೀಡಲಿ. ನಾವು ಸಂಪಾಜೆ ಭಾಗವನ್ನೆ ಹೆಚ್ಚಾಗಿ ಅವಲಂಭಿಸಿದ್ದೇವೆ. ಸರಕಾರ ನಮಗೆ ಯಾವಗ ಎಲ್ಲಿ ಮನೆ ಕಟ್ಟಿ ಜಾಗ ನೀಡುತ್ತದೆ ಎಂಬವುದನ್ನು ಸ್ಪಷ್ಟವಾಗಿ ಹೇಳಬೇಕು. ಇಲ್ಲದಿದ್ದೆರ ನಾವು ಮಾನಸಿಕವಾಗಿ ಕೊರಗಬೇಕಾಗುತ್ತದೆ. ಉಚಿತವಾಗಿ ನೀಡಿದ್ದ ಬಸ್ಸ್ ಪಾಸನ್ನು ರದ್ದುಗೊಳಿಸಿದ್ದಾರೆ. ಇದನ್ನು ರಿನಿವಲ್ ಮಾಡಿ ಕೊಡಬೇಕು. ಪಾಸ್ ಇಲ್ಲದಿರುವುದರಿಂದ ಸಂಚಾರಿಸಲು ನಮಗೆ ಅರ್ಥಿಕ ಸಂಕಷ್ಟ ಎದುರಾಗಿದೆ ಎಂದು ನಿರಾಶ್ರಿತ ರಾಮಕೃಷ್ಣ ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.

ಪಕೃತಿ ವಿಕೋಪದಿಂದಾಗಿ ನಾವು ಬಹಳ ಸಂಕಷ್ಟಕ್ಕೆ ಒಳಗಾಗಿದ್ದೇವೆ. ನಮ್ಮ ಅರ್ಥಿಕ ಪರಿಸ್ಥಿತಿ ಸಂಪೂರ್ಣ ಹದ ಗೆಟ್ಟು ಹೋಗಿದೆ. ನಿರಾಶ್ರಿತರಾದ ಪ್ರತಿಯೊಂದು ಕುಟುಂಬಕ್ಕೆ ಸರಕಾರಿ ಉದ್ಯೋಗ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ನಾವು ಜೀವನ ನಡೆಸುವುದು ತುಂಬಾ ಕಷ್ಟ ಆಗಬಹುದು. ಎಂದು ಶಿಲ್ಪಾ ಜೋಡುಪಾಲ ಹೇಳಿದರು.

Related posts

Leave a Reply