Header Ads
Header Ads
Breaking News

ಪರ್ಯಾಯ ವ್ಯವಸ್ಥೆಗೆ ಬೀದಿಬದಿ ವ್ಯಾಪಾರಸ್ಥರ ಆಗ್ರಹ, ಮಂಗಳೂರು ನಗರದಾದ್ಯಂತ ವಾಹನ ಪ್ರಚಾರ ಜಾಥಾ

ಮಂಗಳೂರು ಮಹಾನಗರ ಪಾಲಿಕೆಯವರು ಬೀದಿ ಬದಿ ವ್ಯಾಪಾರಸ್ಥರ ಮೇಲೆ ನಡೆಸುತ್ತಿರುವ ದಾಳಿ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಾಹನ ಜಾಥಾಕ್ಕೆ ಚಾಲನೆ ದೊರಕಿತು.
ನಗರ ಪ್ರದೇಶದಲ್ಲಿ ೫ ದಿನ ಕಾಲ ಸಂಚಾರ ಮಾಡುವ ವಾಹನ ಚಾಥಾಕ್ಕೆ ಸಿ‌ಐಟಿಯು ಮುಖಂಡ ವಸಂತ್ ಆಚಾರಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಪಾಲಿಕೆ ಸರಿಯಾದ ವ್ಯವಸ್ಥೆ ಮಾಡದೇ ಬೀದಿ ವ್ಯಾಪಾರಸ್ಥರ ಮೇಲೆ ದಾಳಿ ಮಾಡುತ್ತಿದೆ. ಪಾಲಿಕೆ ಮಾಡಬೇಕಾದ ಜವಾಬ್ದಾರಿಯುತ ಪಾತ್ರವನ್ನು ಮರೆಮಾಚಲು ಬಡಪಾಯಿ ಬೀದಿ ಬದಿ ವ್ಯಾಪಾರಸ್ಥರನ್ನು ದೋಷಿಗಳೆಂದು ಬಿಂಬಿಸಿರುವುದು ಹಾಗೂ ವಿನಾ ಕಾರಣ ದಾಳಿ ನಡೆಸಿರುವುದು ತೀರಾ ಖಂಡೀಯ ಅಂತಾ ಹೇಳಿದರು.

Related posts

Leave a Reply