Header Ads
Breaking News

ಪಲಿಮಾರಿನಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ!!

ಪಲಿಮಾರಿನ ಗುಂಡಿಯಲ್ಲಿ ಕೋಳಿಯಂಕಕ್ಕೆ ಪೊಲೀಸರು ದಾಳಿ ಮಾಡಿ ಕೋಳಿಗಳನ್ನು ವಶಪಡಿಸಿಕೊಂಡಿದ್ದರು. ತದ ಬಳಿಕ ಪೊಲೀಸರೇ ಬಹಿರಂಗ ಕೋಳಿ ಏಲಂ ಎಂಬುದಾಗಿ ಹೇಳುತ್ತಿದ್ದರಾದರೂ, ಕೋಳಿಗಳ ಮಾಲಿಕರು ಪೊಲೀಸ್‌ರ ಮುಂಭಾಗದಲ್ಲೇ ಅದು ನನ್ನ ಕೋಳಿ ಯಾರೂ ಅದನ್ನು ಪಡೆಯಬಾರದೆಂಬುದಾಗಿ ತಾಕೀತು ಮಾಡಿ ತಾನೇ ಅದನ್ನು ಯಾರ ಪೈಪೋಟಿಯೂ ಇಲ್ಲದೆ ಪಡೆಯುತ್ತಿದ್ದು ಕಂಡು ಬಂತು.ಕೋಳಿಗಳ ಮಾಲಿಕರ ಈ ರೀತಿಯ ಹೊಂದಾಣಿಕೆಯ ಫಲವಾಗಿ ಹತ್ತು- ಹದಿನೈದು ಸಾವಿರ ರೂಪಾಯಿ ಬೆಲೆಯ ಕೋಳಿಗಳೂ ಇದರಲ್ಲಿದ್ದು ಅದೂ ಕೂಡ ಮಾಮೂಲು ಕೋಳಿಗಳ ಬೆಲೆಗೆ ಹರಾಜು ಆಗಿದೆ. ಪಲಿಮಾರಿನ ಧೂಮಾವತಿ ದೈವಸ್ಥಾನವೊಂದರ ಹೆಸರಲ್ಲಿ ನಡೆಸಿದ ಬೃಹತ್ ಕೋಳಿಯಂಕಕ್ಕೆ ಕಾರ್ಕಳ ಎಎಸ್ಪಿ ತಂಡ ದಾಳಿ ನಡೆಸಿದ್ದು, ಈ ಸಂದರ್ಭ 18 ಮಂದಿ ಸಹಿತ 68 ಜೀವಂತ ಕೋಳಿ, 19ಸತ್ತ ಕೋಳಿ ಸಹಿತ 14 ಸಾವಿರ ರೂಪಾಯಿ ವಶಪಡಿಸಿಕೊಂಡಿದ್ದರು. ಇದೇ ಸಂದರ್ಭ ಆರೋಪಿಗಳು ಪೊಲಿಸರ ಮೇಲೆ ಕಲ್ಲು ತೂರಾಟ ಕೂಡ ನಡೆಸಿದ ಬಗ್ಗೆ ವರದಿಯಾಗಿದೆ.

Related posts

Leave a Reply

Your email address will not be published. Required fields are marked *