Header Ads
Header Ads
Breaking News

ಪಲಿಮಾರಿನಲ್ಲಿ ಬಾವಿಗೆ ಬಿದ್ದ ಜಿಂಕೆ ಮೃತ್ಯು


ಪಲಿಮಾರು ಮಠದ ಸಮೀಪವಿರುವ ಮನೆಯ ಬಾವಿಗೆ ಜಿಂಕೆಯೊಂದು ಬಿದ್ದಿದ್ದು, ಮುಂಜಾನೆ ಬಾವಿಯಲ್ಲಿ ಒದ್ದಾಟ ನಡೆಸುತ್ತಿರುವುದನ್ನು ನೋಡಿದ ಸ್ಥಳೀಯರು ಬಾವಿಯಿಂದ ಮೇಲಕೆತ್ತಿದ ಘಟನೆ ನಡೆದಿದೆ.
ಜಿಂಕೆಯನ್ನು ಸ್ಥಳೀಯರು ಬಾವಿಯಿಂದ ಮೇಲಕೆತ್ತಿದ್ದ ಸಂದರ್ಭ ಮೃತಪಟ್ಟಿತ್ತು ಎಂದು ತಿಳಿದುಬಂದಿದೆ. ಈ ಜಿಂಕೆ ತಡರಾತ್ರಿ ಬಿದ್ದಿರಬಹುದೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನು ಪಶು ವೈದ್ಯಾಧಿಕಾರಿಯನ್ನು ಸ್ಥಳಕ್ಕೆ ಕರೆದ ಸ್ಥಳೀಯರು ವೈದ್ಯಾಧಿಕಾರಿಗಳು ಬರಲು ಒಪ್ಪದ ಕಾರಣ ದೂರವಾಣಿ ಮೂಲಕ ಕರೆ ಮಾಡಿ ಪಶು ವೈದ್ಯಾಧಿಕಾರಿಯನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಆ ನಂತರ ಆರ್ಧ ಗಂಟೆ ಬಿಟ್ಟು ವೈದ್ಯಾಧಿಕಾರಿ ಬರುವ ಭರವಸೆ ನೀಡಿದ್ದರು ಎನ್ನಲಾಗಿದೆ.
ವರದಿ: ಸುರೇಶ್ ಎರ್ಮಾಳ್ ಪದುಬಿದ್ರಿ

Related posts

Leave a Reply