Breaking News

ಪಲಿಮಾರ್‌ನಲ್ಲಿ ಸ್ಮಶಾನವಿಲ್ಲದೆ ಗ್ರಾ. ಪಂ.ನೆದುರು ಹೆಣ ಸುಡಲು ಪ್ರಯತ್ನ, ಹೆಣದೊಡನೆ ದಲಿತರಿಂದ ಗ್ರಾಮ ಪಂಚಾಯತ್‌ಗೆ ಮುತ್ತಿಗೆ

ಪಲಿಮಾರು ವ್ಯಾಪ್ತಿಯಲ್ಲಿ ಸ್ಮಶಾನವಿಲ್ಲದ ಆಕ್ರೋಶ ಇಂದು ಹೊರಬಿದ್ದಿದೆ. ಈ ಗ್ರಾಮದ ಹಿರಿಯ ವ್ಯಕ್ತಿಯೋರ್ವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಗೆ ಸ್ಥಳವಿಲ್ಲದೆ ಜನ ಪಲಿಮಾರ್ ಗ್ರಾ. ಪಂ. ಮುಂದೆ ಪ್ರತಿಭಟನೆಯನ್ನು ನಡೆಸಿದರು.
ಪ್ರತಿಭಟನಾಕಾರರು ಮೃತ ದೇಹವನ್ನು ಗ್ರಾಮ ಪಂಚಾಯತ್ ಮುಂಭಾಗ ಸುಡಲು ಸಿದ್ಧತೆಗಳನ್ನು ನಡೆಸಿದ್ದರು. ಈ ಗ್ರಾಮಕ್ಕೊಂದು ಸೂಕ್ತ ಸ್ಮಶಾನವನ್ನು ಒದಗಿಸಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರಲ್ಲದೆ ಸಂಬಂಧಿಸಿದವರು ಹಾಗೂ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡುವಂತೆ ಪ್ರತಿಭಟನಕಾರರು ಒತ್ತಾಯಿಸಿದರು.

Related posts

Leave a Reply