Header Ads
Header Ads
Breaking News

ಪಳ್ಳಿಹೊಳೆ ರಸ್ತೆ ಕಾಮಗಾರಿ ಆರಂಭ v4 ನ್ಯೂಸ್ ವರದಿಗೆ ಎಚ್ಚೆತ್ತ ಗುತ್ತಿಗೆದಾರ ಕಂಪೆನಿ ಆರು ತಿಂಗಳೊಳಗೆ ಕಾಮಗಾರಿ ಮುಗಿಸುವ ಭರವಸೆ.

ಭಟ್ಕಳ ತಾಲೂಕಿನ ಶಿರಾಲಿಯ ಪಳ್ಳಿಹೊಳೆ ಕಾಮಗಾರಿಯ ಬಗ್ಗೆ v4 ನ್ಯೂಸ್‌ನಲ್ಲಿ ಸಮಗ್ರ ವರದಿಯನ್ನು ಬಿತ್ತರಿಸಲಾಗಿತ್ತು. ಇದೀಗ ವರದಿಗೆ ಎಚ್ಚೆತ್ತುಕೊಂಡು ಕಾಮಗಾರಿಯನ್ನು ಆರು ತಿಂಗಳೊಳಗಾಗಿ ಮುಗಿಸಿಕೊಡುವ ಭರವಸೆ ಪಿಲಿಪ್ಸ್ ಎಂಡ್ ಕೋ ಗುತ್ತಿಗೆದಾರ ಕಂಪನಿ ನೀಡಿದೆ.
ಶಿರಾಲಿಯ ಪಳ್ಳಿಹೋಳೆ ಸೇತುವೇಯ ಬಗ್ಗೆ ನಮ್ಮ ವಾಹಿನಿಯು ಸಮಗ್ರ ವರದಿಯನ್ನು ನೀಡಿತ್ತು ಮಳೆಗಾಲದ ಸಂದರ್ಭದಲ್ಲಿ ಸೇತುವೆ ಕಾಮಗಾರಿ ಪ್ರಾರಂಭಿಸಿದ ಹಿನ್ನೆಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವ ರೀತಿಯಲ್ಲಿ ಸಮಸ್ಯೆ ಉಂಟಾಗುತ್ತದೆ ಎಂಬ ಸಂಪೂರ್ಣ ವಿವರ ಸಾರ್ವಜನಿಕರ ಮುಂದೆ ಸವಿಸ್ಥಾರವಾಗಿ ಬಿತ್ತರಿಸಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಗುತ್ತಿಗೆದಾರ ಕಂಪನಿಯು ಈಗ ತರಾತುರಿಯಲ್ಲಿ ಕಾಮಗಾರಿಯನ್ನು ಪ್ರಾರಂಭಿಸಿದೆ. ಮಳೆಗಾಲದಲ್ಲಿ ಸಾರ್ವಜನಿಕರಿಗೆ ಸೇತುವೆಯ ಕಾಮಗಾರಿಯಿಂದ ಯಾವುದೆ ಸಮಸ್ಯೆ ಉಂಟಾಗದಂತೆ ಸೇತುವೆಯ ಬದಲಾಗಿ ಪರ್‍ಯಾಯ ವ್ಯವಸ್ಥೆಯನ್ನು ಮಾಡಿಕೊಡುವುದಾಗಿ ಭರವಸೆಯನ್ನು ನೀಡಿದೆ. ಈ ಬಗ್ಗೆ ಪೀಲಿಫ್ಸ್ ಎಂಡ್ ಕೋ ಗುತ್ತಿಗೆದಾರ ಕಂಪನಿಯ ಅಧಿಕಾರಿ ಚಂದ್ರಶೇಕರ್ ಮಾತನಾಡಿ, ಈಗ ನಾವು ಕಾಮಗಾರಿಯನ್ನು ಪ್ರಾರಂಭಿಸಿರುತ್ತೇವೆ. ಮಳೆಗಾಲದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೇತುವೆಯ ಬದಲಾಗಿ ತಾತ್ಕಾಲಿಕವಾಗಿ ಪರ್‍ಯಾಯ ಸೇತುವೇಯನ್ನು ನಿರ್ಮಾಣ ಮಾಡಿಕೊಡುತ್ತೇವೆ ಎಂದು ಹೇಳಿದರು.ಗುತ್ತಿಗೆದಾರ ಕಂಪನಿಯ ಅಧಿಕಾರಿ ಭರವಸೆಯನ್ನೆನೊ ಕೊಟ್ಟಿದ್ದಾರೆ ಆದರೆ ಅವರ ಭರವಸೆ ಸಾರ್ವಜನಿಕರಿಗೆ ಎಷ್ಟರ ಮಟ್ಟಿಗೆ ಉಪಯೋಗಕ್ಕೆ ಬರುತ್ತದೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.
ವರದಿ ರಾಘವೇಂದ್ರ ಮಲ್ಯ ಭಟ್ಕಳ