Header Ads
Header Ads
Breaking News

ಪಶ್ಚಿಮ ಕರಾವಳಿಯ ಮೀನುಗಾರರಿಂದ ಕಡಲಪೂಜೆ. ಕಡಲಿನಲ್ಲಿ ಹೇರಳವಾಗಿ ಮೀನು ಲಭ್ಯವಾಗಲಿ ಎಂದು ಪೂಜೆ. ಸಮುದ್ರ ರಾಜನಿಗೆ ಹಾಲೆರೆದ ಮೀನುಗಾರರು.

ಕರಾವಳಿ ಆಚರಣೆಗಳ ಊರು. ಪೃಕೃತಿ ಪ್ರಿಯರಾಗಿರುವ ಇಲ್ಲಿನ ಜನರು ತಮಗೆ ಸಂಪತ್ತುನೀಡುವ ಮೂಲವನ್ನು ದೇವರೆಂದು ಆರಾಧಿಸುತ್ತಾರೆ. ಮೀನುಗಾರಿಕೆ ಇಲ್ಲಿನ ಪ್ರಮುಖ ವಾಣಿಜ್ಯೋದ್ಯಮ. ಇಂದು ಪಶ್ಚಿಮ ಕರಾವಳಿಯ ಮೀನುಗಾರರು ಕಡಲಪೂಜೆ ಮಾಡಿದ್ರು. ಯಾವುದೇ ಅಪಾಯವಿಲ್ಲದೆ ಮೀನುಗಾರಿಕೆ ನಡೆಯಲಿ, ಕಡಲಿನಲ್ಲಿ ಹೇರಳವಾಗಿ ಮೀನು ಲಭ್ಯವಾಗಲಿ ಎಂದು ಸಮುದ್ರ ರಾಜನ ಪೂಜೆಗೈಯ್ಯಲಾಯ್ತು. ಮೀನುಗಾರರು ಸಮುದ್ರರಾಜನಿಗೆ ಹಾಲೆರೆದು ಪಶ್ಚಿಮಕ್ಕೆ ಕೈ ಮುಗಿಯೋ ದಿನವನ್ನು ಸಂಭ್ರಮದಿಂದ ಆಚರಿಸಿದರು.ವರ್ಷದ ಮುಕ್ಕಾಲು ಭಾಗವನ್ನು ಸಮುದ್ರದಲ್ಲಿ ಕಳೆಯುವ ಮೀನುಗಾರಿಗೆ ಸಮುದ್ರವೇ ಜೀವನ. ಲಾಭವಾಗಲಿ, ನಷ್ಟವಾಗಲಿ ಎಲ್ಲವನ್ನು ಪ್ರೀತಿಯಿಂದ ಸ್ವೀಕರಿಸುತ್ತಾರೆ. ಮಳೆಗಾಲದಲ್ಲಿ ಸ್ಥಗಿತಗೊಂಡಿದ್ದ ಮೀನುಗಾರಿಕೆ ಆರಂಭಕ್ಕೆ ಮುನ್ನ ಮೀನುಗಾರರು ಸಮುದ್ರ ರಾಜನಿಗೆ ಪ್ರಾರ್ಥಿಸುವ ಸಂಪ್ರದಾಯ ವಿದೆ. ಮಲ್ಪೆ ಕಡಲು ತೀರದಲ್ಲಿರುವ ವಡಭಾಂಡೇಶ್ವರ ಬಲರಾಮ ದೇವರ ಸನ್ನಿಧಿಯಲ್ಲಿ ಸೇರಿದ ಮೀನುಗಾರರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ದೇವರ ಪ್ರಸಾದವನ್ನು ಕೈಯ್ಯಲ್ಲಿ ಹಿಡಿದು ಕಡಲ ತೀರಕ್ಕೆ ಮೆರವಣಿಗೆಯಲ್ಲಿ ಸಾಗಿ ಬಂದ್ರು. ನಂತರ ಮಲ್ಪೆ ಕಡಲ ಕಿನಾರೆಯಲ್ಲಿ ರಚಿಸಲಾದ ಮಂಡಲಕ್ಕೆ ವಿಶೇಷ ಪೂಜೆ ಸಲ್ಲಿಸಿದ್ರು. ಮುಂದಿನ ಒಂದು ಒಂದು ವರ್ಷಗಳ ಕಾಲ ಬಲೆ ತುಂಬ ಮೀನು ಸಿಗಲಿ, ಮತ್ಸ್ಯ ಸಂಪತ್ತು ವೃದ್ಧಿಸಲಿ, ಪ್ರಾಕೃತಿಕ ವಿಕೋಪವಾಗದಂತೆ ಅಭಯ ನೀಡಿ ಎಂದು ಮೀನುಗಾರರು ಕಡಲಿಗೆ ಹಾಲೆರೆದು , ಸೀಯಾಳ, ಹಿಂಗಾರ ಅರ್ಪಿಸಿ ಪ್ರಾರ್ಥಿಸಿಕೊಂಡರು.ಕಡಲ ಮಕ್ಕಳು ಅಪ್ರತಿಮ ಸಾಹಸಿಗಳು. ಬೋಟಿನಲ್ಲಿ ಬಲೆ ತುಂಬಿಕೊಂಡು ಕಡಲಿಗಿಳಿದರೆ 15ದಿನ ಕಡಲು ಬಿಟ್ಟು ಭೂಮಿಗೆ ಬರಲ್ಲ. ಆಳಸಮುದ್ರ ಸಾವಿರಾರು ಬೋಟುಗಳು ಇಂದಿನಿಂದ ಬೃಹತ್ ಪ್ರಮಾಣದ ಮೀನುಗಾರಿಕೆಯಲ್ಲಿ ತೊಡಗಲಿವೆ.ಸಮುದ್ರದ ಅಬ್ಬರ ,ಅತೀಯಾದ ಮಳೆಯ ಪ್ರಭಾವದಿಂದ ಕಳೆದ ಎರಡು ತಿಂಗಳಿನಲ್ಲಿ ನಡೆಯಬೇಕಿದ್ದ ನಾಡ ದೋಣಿ ಮೀನುಗಾರಿಕೆ ನಡೆದಿಲ್ಲ. ಎರಡು ಮೂರು ದಿನದ ಮೀನುಗಾರಿಕೆ ಮಾತ್ರ ನಾಡದೋಣಿ ಮೀನುಗಾರಿಕೆ ನಡೆದಿದೆ.ನಾಡದೋಣಿ ಮೀನುಗಾರರು ನಷ್ಟ ಅನುಭವಿಸಿದ್ದಾರೆ.ಹಾಗಾಗಿ ರೈತರಿಗೆ ಪರಿಹಾರ ನೀಡುವಂತೆ ಮೀನುಗಾರರಿಗೂ ಸರ್ಕಾರ ಪರಿಹಾರ ನೀಡಬೇಕು ಎಂದು ಮೀನುಗಾರರು ಆಗ್ರಹಿಸಿದ್ದಾರೆ.ಅಧಿಕ ಮಳೆಯಾಗಿ ಸಮುದ್ರ ಪ್ರಕ್ಷಬ್ದುಗೊಂಡ ಕಾರಣ ಈ ಋತುವಿನಲ್ಲಿ ಉತ್ತಮ ಆಳ ಸಮುದ್ರ ಮೀನುಗಾರಿಕೆಯಾಗುವ ನೀರೀಕ್ಷೆ ಮೀನುಗಾರರದಾಗಿದೆ.ಕಡಲಿನಲ್ಲಿ ಮೀನಿನ ಬೇಟೆಯ ವೇಳೆ ನೂರೆಂಟು ಅಪಾಯಗಳು ಎದುರಾಗುತ್ತೆ. ಯಾವುದೇ ಅನಾಹುತ ಆಗದೇ ಉತ್ತಮ ಮೀನುಗಾರಿಕೆ ಆಗಲಿ. ಕಡಲಿ ಶಾಂತವಾಗಿ ಕಡಲ ಮಕ್ಕಳ ಜೀವನ ಪ್ರಶಾಂತವಾಗಿ ಸಾಗಲಿ ಅನ್ನೋದೇ ಎಲ್ಲರ ಹಾರೈಕೆ.

Related posts

Leave a Reply