Header Ads
Header Ads
Breaking News

ಪಾಕಿಸ್ತಾನದ ಬಹಾವಲ್ಪುರದಲ್ಲಿ ಪೆಟ್ರೋಲ್ ಟ್ಯಾಂಕರ್ ಸ್ಫೋಟ, 151 ಜನ ಸುಟ್ಟು ಬೂದಿ, 140 ಜನರಿಗೆ ಗಂಭೀರ ಗಾಯ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಪೆಟ್ರೋಲ್ ಟ್ಯಾಂಕರೊಂದು ಉರುಳಿ ಬಿದ್ದು ಅನಂತರ ಸ್ಫೋಟಿಸಿದ್ದರಿಂದ 151 ಜನರು ಸುಟ್ಟು ಕರಕಲಾಗಿದ್ದಾರೆ. 140 ಜನರು ಗಂಭೀರವಾಗಿ ಗಾಯ ಗೊಂಡಿದ್ದಾರೆ.
ಕರಾಚಿಯಿಂದ ಲಾಹೋರ್ ಕಡೆಗೆ ಹೋಗುತ್ತಿದ್ದ ಟ್ಯಾಂಕರ್ ಬಹಾವಲ್ಪುರ ಜಿಲ್ಲೆಯ ಅಹ್ಮದ್ಪುರ ಶರ್ಕಿಯಾ ಎಂಬಲ್ಲಿ ಟೈರ್ ಸ್ಫೋಟಗೊಂಡು ಮಗುಚಿ ಬಿತ್ತು. ಈ ಸ್ಥಳ ಲಾಹೋರ್ನಿಂದ ೪೦೦ ಕಿಮೀ ದೂರದಲ್ಲಿದೆ. ಟ್ಯಾಂಕರ್ನಿಂದ ಸೋರುತ್ತಿದ್ದ ಪೆಟ್ರೋಲ್ ಸಂಗ್ರಹಿಸಿಕೊಳ್ಳಲು ಹತ್ತಿರದ ಗ್ರಾಮಗಳ ಜನರು ಮುಗಿ ಬಿದ್ದರು. ಆ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಸಿಗರೇಟ್ ಹಚ್ಚಿದ್ದರಿಂದಾಗಿ ಬೆಂಕಿ ತಗುಲಿ ಟ್ಯಾಂಕರ್ ಸ್ಫೋಟಗೊಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಸ್ಲಿಮರ ಪವಿತ್ರ ಈದ್ ಉಲ್ ಫಿತ್ರ್ ಮುನ್ನಾದಿನ ಈ ದುರಂತ ಸಂಭವಿಸಿದೆ.
ಪಾಕಿಸ್ತಾನದ ಇತಿಹಾಸದಲ್ಲಿ ಇದು ಅತಿ ದೊಡ್ಡ ದುರಂತ ಎಂದು ಅಧಿಕಾರಿಗಳು ಹೇಳಿದ್ದಾರೆ. ಯಾವುದೇ ವೈದ್ಯಕೀಯ ನೆರವು ದೊರೆಯುವ ಮೊದಲೇ ಕನಿಷ್ಠ ೧೨೩ ಮಂದಿ ಸಜೀವವಾಗಿ ದಹಿಸಿಹೋದರು. ಅನಂತರ, ಸುಟ್ಟ ಗಾಯಗಳಿಂದ ನರಳುತ್ತಿದ್ದ ನೂರಕ್ಕೂ?ಹೆಚ್ಚು ಜನರನ್ನು ರಕ್ಷಣಾ ಕಾರ್ಯಕರ್ತರು ಜಿಲ್ಲಾ ಆಸ್ಪತ್ರೆ ಮತ್ತು ಬಹಾವಲ್ಪುರದ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿದರು. ಇವರಲ್ಲಿ ಹೆಚ್ಚಿನವರ ಸ್ಥಿತಿ ಗಂಭೀರವಾಗಿದೆ ಎಂದು ಜಿಲ್ಲಾ ಸಮನ್ವಯಾಧಿಕಾರಿ ರಾಣಾ ಸಲೀಂ ಅಫ್ಜಲ್ ಹೇಳಿದ್ದಾರೆ.
ಟ್ಯಾಂಕರ್ ಮಗುಚಿದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು, ದೂರ ಹೋಗುವಂತೆ ಜನರಿಗೆ ಮನವಿ ಮಾಡಿದರು. ಆದರೆ, ಅದನ್ನು ಲೆಕ್ಕಿಸದ ಜನರು ಪೆಟ್ರೋಲ್ ತುಂಬಿಕೊಳ್ಳುವುದರಲ್ಲಿಯೇ ಮಗ್ನರಾಗಿದ್ದರು. ಕೆಲವೇ ಸೆಕೆಂಡ್ಗಳಲ್ಲಿ ಟ್ಯಾಂಕರ್ ಸ್ಫೋಟಗೊಂಡಿತು. ಜನರಿಗೆ ತಪ್ಪಿಸಿಕೊಳ್ಳುವುದಕ್ಕೆ ಅವಕಾಶವೇ?ಇಲ್ಲದಂತೆ ಬೆಂಕಿಯ ಕೆನ್ನಾಲಿಗೆ ಇಡೀ ಪ್ರದೇಶವನ್ನು ವ್ಯಾಪಿಸಿತು ಎಂದು ಪ್ರಾದೇಶಿಕ ಪೊಲೀಸ್ ಅಧಿಕಾರಿ ರಜಾ ರಿಫತ್ ಹೇಳಿದರು.

Related posts

Leave a Reply