Header Ads
Header Ads
Header Ads
Breaking News

ಪಾಕಿಸ್ತಾನ ಧ್ವಜಕ್ಕೆ ಬೆಂಕಿ ಹಚ್ಚಿ ಆಕ್ರೋಶ ವಿ‌ಎಚ್‌ಪಿ ಹಾಗೂ ಬಜರಂಗದಳ ಪ್ರತಿಭಟನೆ

ಪುತ್ತೂರು; ಜಗತ್ತಿನಲ್ಲಿ ತಾಯಂದಿರಿಗೆ ಗೌರವ ನೀಡುವ ದೇಶವೊಂದಿದ್ದರೆ ಅದು ಭಾರತ. ಸ್ವಾಭಿಮಾನದ ಸಂಕೇತವಾಗಿರುವ ಮಾತೆಯರ ಮಾಂಗಲ್ಯ, ಬಳೆಯನ್ನು ಕಳಚಿ ಹಿಂಸಾತ್ಮಕ ರೀತಿಯಲ್ಲಿ ಅವಮಾನವೀಯ ಮಾಡಿದ್ದು ಅತ್ಯಂತ ನೀಚತನದ ಕೃತ್ಯವಾಗಿದೆ. ಇದು ಕೇವಲ ಮಹಿಳೆಯರಿಗೆ ಆದ ಅವಮಾನವಲ್ಲ ಭಾರತ ದೇಶದ 125 ಕೋಟಿ ಜನರಿಗೆ ಮಾಡಿದ ಅವಮಾನವಾಗಿದೆ ಎಂದು ವಿಹಿಂಪ ದಕ್ಷಿಣ ಪ್ರಾಂತ ಗೋರಕ್ಷಾ ಪ್ರಮುಖ್ ಮುರಳೀಕೃಷ್ಣ ಹಸಂತಡ್ಕ ಆಕ್ರೋಶ ವ್ಯಕ್ತ ಪಡಿಸಿದರು.

ಅವರು ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾದ ಭಾರತೀಯ ವೀರಯೋಧ ಕುಲಭೂಷಣ್ ಜಾದವ್ ಅವರನ್ನು ಭೇಟಿ ಮಾಡಲೆಂದು ಅವರ ತಾಯಿ ಹಾಗೂ ಪತ್ನಿ ಪಾಕಿಸ್ತಾನಕ್ಕೆ ತೆರಳಿದ ಸಂದರ್ಭ ಹಿಂಸಾತ್ಮಕ ಅವಮಾನ ಮಾಡಿದ ಪಾಕಿಸ್ತಾನದ ನೀಚ ಕೃತ್ಯವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಪಾಕಿಸ್ತಾನ ಧ್ವಜವನ್ನು ಸುಟ್ಟು ಹಾಕಿ ಪುತ್ತೂರು ಬಸ್ ನಿಲ್ದಾಣದ ಬಳಿ ಶುಕ್ರವಾರ ಸಂಜೆ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಈಗಾಗಲೇ ಪಾಕಿಸ್ತಾನಕ್ಕೆ ಭಾರತದ ವೀರ ಯೋಧರು ಸಮರ್ಪಕವಾದ ಉತ್ತರ ನೀಡುತ್ತಲೇ ಇದ್ದಾರೆ. ಮುಂದಿನ ದಿನಗಳಲ್ಲಿ ಪಾಕಿಸ್ತಾನದ ಸೈನಿಕರು ಒಂದು ಹೆಜ್ಜೆ ಮುಂದಿಟ್ಟು ನಮ್ಮ ಸೈನಿಕರ ಮೇಲೆ ದಾಳಿ ಮಾಡುವ ಹುನ್ನಾರ ನಡೆಸಿದರೆ ಪಾಕಿಸ್ತಾನವನ್ನು ಪ್ರಪಂಚದ ಭೂಪಟದಲ್ಲೇ ಇಲ್ಲವಂತೆ ಮಾಡುವ ನೇರ ಸವಾಲಿನ ಎಚ್ಚರಿಕೆಯನ್ನು ನೀಡಿದ್ದಾರೆ ಇದನ್ನು ಪಾಕಿಸ್ತಾನ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಪ್ರತಿಭಟನಾ ಸಭೆಯಲ್ಲಿ ಬಜರಂಗದಳ ಸಹಸಂಚಾಲಕ ಹರೀಶ್ ದೋಳ್ಪಾಡಿ, ಪ್ರಖಂಡ ಸಂಚಾಲಕ ನಿತಿನ್ ನಿಡ್ಪಳ್ಳಿ, ವಿಹಿಂಪ ಪುತ್ತೂರು ಪ್ರಖಂಡ ಅಧ್ಯಕ್ಷ ಜನಾರ್ದನ ಬೆಟ್ಟ, ವಿಹಿಂಪ ಜಿಲ್ಲಾ ಕಾರ್ಯದರ್ಶಿ ಸತೀಶ್ ಭಟ್, ಬಜರಂಗದಳ ನಗರ ಸಂಚಾಲಕ ಹರಿಪ್ರಸಾದ್ ರೆಂಜಾಳ, ಮುಖಂಡರಾದ ಶ್ಯಾಮ್ ಸುದರ್ಶನ್, ಸಹಜ್ ರೈ, ಅರ್ಪಣಾ ಶಿವಾನಂದ, ಮೋಹಿನಿ ದಿವಾಕರ, ಪ್ರಭಾ ಹರೀಶ್ ಆಚಾರ್ಯ, ಮಾಧವ ಪೂಜಾರಿ, ಮನೋಹರ ಕಲ್ಲಾರೆ, ಅಜಿತ್ ರೈ ಹೊಸಮನೆ, ಬಾಲಚಂದ್ರ ಸೂತ್ರಬೆಟ್ಟು ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು.

Related posts

Leave a Reply