Header Ads
Breaking News

ಪಾಕ್ ಪರ ಘೋಷಣೆ ಕೂಗಿದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು; ಬಿಜೆಪಿ ಯುವ ಮೋರ್ಚಾ ಮನವಿ

ಅಮೂಲ್ಯ ಲಿಯೋನ್ ಎಂಬಾಕೆ ಪಾಕಿಸ್ಥಾನ ಜಿಂದಾಬಾದ್ ಕೂಗಿರುವುದನ್ನು ದೇಶದ್ರೋಹವೆಂದು ಪರಿಗಣಿಸಿ ಆಯೋಜಕನ ಸಹಿತ ಅಮೂಲ್ಯ ಲಿಯೋನ್ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಮಂಗಳೂರು ನಗರ ಉತ್ತರ ಮಂಡಲದ ಅಧ್ಯಕ್ಷ ಭರತ್ರಾಜ್ ಕೃಷ್ಣಾಪುರ ನೇತೃತ್ವದಲ್ಲಿ ಸುರತ್ಕಲ್ ಠಾಣಾಧಿಕಾರಿ ಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭ ಮೋರ್ಚ ಪ್ರಧಾನ ಕಾರ್ಯದರ್ಶಿ ಸಂಜಿತ್ , ಕಾರ್ಪೋರೇಟರ್  ವರುಣ್ ಚೌಟ, ಮುಖಂಡರಾದ ಉಮೇಶ್ ದೇವಾಡಿಗ, ಪ್ರಜ್ವಲ್, ಉದಯ್ ಆಳ್ವ, ತಿಲಕ್ರಾಜ್ ಅಮೀನ್, ಭಾಸ್ಕರ್ ಕೋಟ್ಯಾನ್, ಸಂದೇಶ್ ದೇವಾಡಿಗ, ಹರಿಪ್ರಸಾದ್, ರಾಕೇಶ್, ದಿವ್ಯೇಶ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *