Breaking News

ಪಾಣೆಮಂಗಳೂರು ನೇತ್ರಾವತಿ ಸೇತುವೆ ಬಳಿ ಅಪರಿಚಿತ ಶವ,  ಈಜುಗಾರರ ನೆರವಿನಿಂದ ನದಿಯಲ್ಲಿ ತೇಲುತ್ತಿದ್ದ ಶವ ಮೇಲಕ್ಕೆ


ಇಲ್ಲಿನ ಪಾಣೆಮಂಗಳೂರು ನೇತ್ರಾವತಿ ಸೇತುವೆಯ ಅಡಿಭಾಗ ನದಿಯಲ್ಲಿ ಸೋಮವಾರ ಬೆಳಿಗ್ಗೆ ಅಪರಿತ ಶವವೊಂದು ಪತ್ತೆಯಾಗಿದೆ. ನದಿಯಲ್ಲಿ ತೇಲುತ್ತಿದ್ದ ಶವವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತದೇಹ ಸಂಪೂರ್ಣವಾಗಿ ಊದಿಗೊಂಡಿದ್ದು ನೀರಿಗೆ ಬಿದ್ದು ಎರಡು ದಿನಗಳು ಕಳೆದಿರಬಹುದು ಎಂದು ಶಂಕಿಸಲಾಗಿದೆ. ಶವದ ಕಿವಿಯಲ್ಲಿ ಹಿಯರ್ ಪೋನ್ ಸಿಕ್ಕಿಸಿದ ರೀತಿಯಲ್ಲಿದ್ದು ಮೇಲ್ಭಾಗದ ರಸ್ತೆಯಲ್ಲಿ ಬೈಕ್ ಪತ್ತೆಯಾಗಿದೆ. ಆತ್ಮಹತ್ಯೆಯೋ, ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೋ ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.
ಬಂಟ್ವಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ಈಜುಗಾರರ ನೆರವಿನಿಂದ ಮೃತದೇಹವನ್ನು ನೀರಿನಿಂದ ಮೇಲೆತ್ತಿದ್ದಾರೆ. ನದಿಯಲ್ಲಿ ಮೃತದೇಹ ತೇಲುತ್ತಿರುವ ಸುದ್ದಿ ತಿಳಿಯುತ್ತಿದಂತೆಯೇ ನದಿ ಕಿನಾರೆ ಹಾಗೂ ಪಾಣೆಮಂಗಳೂರು ಸೇತುವೆಯ ಮೇಲೆ ಅಪಾರ ಸಂಖ್ಯೆಯಲ್ಲಿ ಕುತೂಹಲಿಗರು ನೆರೆದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಯಿತು. ಸೋಮವಾರ ಶಾಲಾ ಆರಂಭ ದಿನವಾಗಿದ್ದು ಹಾಗೂ ಪೀಕ್ ಅವರ್‌ನ ಸಂದರ್ಭವಾಗಿದ್ದುದರಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೊಂದರೆ ಪಡುವಂತಾಯಿತು.

Related posts

Leave a Reply