Header Ads
Header Ads
Breaking News

ಪಾದಚಾರಿಗೆ ಢಿಕ್ಕಿಯಾದ ಅಪರಿಚಿತ ವಾಹನ. ಸ್ಥಳದಲ್ಲೇ ಮೃತಪಟ್ಟ ವಯೋವೃದ್ಧ. ಉಚ್ಚಿಲ ಬಡಾ ಗ್ರಾ.ಪಂ.ನಲ್ಲಿ ನಡೆದ ದುರ್ಘಟನೆ.

ಯಾವುದೋ ವಾಹನ ಢಿಕ್ಕಿಯಾಗಿ ಪರಾರಿಯಾದ ಕಾರಣ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಉಚ್ಚಿಲ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ೬೬ರ ಡೊಮಿನಿನ್ ಫ್ಲಾಝಾ ಬಳಿ ನಡೆದಿದೆ.ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಂದಾಜು 60 ವರ್ಷ ಪ್ರಾಯದ ವ್ಯಕ್ತಿಗೆ ಯಾವುದೋ ಅಪರಿಚಿತ ವಾಹನ ಢಿಕ್ಕಿಯಾಗಿ ಪರಾರಿಯಾಗಿದೆ. ಇದರಿಂದ ಗಂಭೀರ ಗಾಯಗೊಂಡಿದ್ದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ. ಮೃತದೇಹವನ್ನು ಸ್ಥಳೀಯರ ಸಹಕಾರದಿಂದ ಪಡುಬಿದ್ರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿದೆ.

Related posts

Leave a Reply