Header Ads
Header Ads
Header Ads
Breaking News

ಪಾದಚಾರಿಗೆ ಮೀನಿನ ವಾಹನ ಡಿಕ್ಕಿ ಪಾದಚಾರಿ ಸ್ಥಳದಲ್ಲೇ ಸಾವು ಎರ್ಮಾಳು ಬುಧಗಿ ಪೆಟ್ರೋಲ್ ಬಂಕ್ ಬಳಿ ಘಟನೆ

ಲಾರಿ ಚಾಲಕನೋರ್ವ ಲಾರಿಯಿಂದ ಇಳಿದು ರಸ್ತೆಯಂಚಿನಲ್ಲಿ ನಿಂತಿದ್ದ ವೇಳೆ, ವೇಗವಾಗಿ ಬಂದ ಮೀನಿ ಲಾರಿ ಆತನಿಗೆ ಸವರಿಕೊಂಡು ಹೋದ ಪರಿಣಾಮ ತಲೆಗೆ ಗಂಭೀರ ಏಟು ತಗುಲಿ ಸ್ಥಳದಲ್ಲೇ ಮೃತಪಟ್ಟ ಘಟನೆ ಎರ್ಮಾಳು ಬುಧಗಿ ಪೆಟ್ರೋಲ್ ಬಂಕ್ ಬಳಿ ಗುರುವಾರ ರಾತ್ರಿ ನಡೆದಿದೆ.

ಮೃತ ಲಾರಿ ಚಾಲಕ ಮಹಾರಾಷ್ಟ್ರ ಹೈದಾಪುರ ನಿವಾಸಿ ಅಬ್ದುಲ್ ಮೌಶೀನ್(28). ಇವರು ಲಾರಿಯಲ್ಲಿ ಮಹಾರಾಷ್ಟ್ರದ ಅಮರಾವತಿಯಿಂದ ಮಂಗಳೂರಿಗೆ ಕಿತ್ತಾಳೆ ಹಣ್ಣು ಸಾಗಿಸುತ್ತಿದ್ದು, ಎರ್ಮಾಳು ಬಂಕ್ ಬಳಿ ಲಾರಿ ನಿಲ್ಲಿಸಿ ಪಕ್ಕದ ಡಾಬಕ್ಕೆ ಹೋಗುವುದಕ್ಕಾಗಿ ಲಾರಿಗೆ ಅಂಟಿಕೊಂಡೇ ನಿಂತಿದ್ದ ವೇಳೆ ಮಲ್ಪೆಯಿಂದ ಮಂಗಳೂರು ಕಡೆಗೆ ಮೀನು ಸಾಗಾಟ ನಡೆಸುತ್ತಿದ್ದ ಮಿನಿ ಲಾರಿಯ ಚಾಲಕ ಅಜಾಗರುಕತೆಯಿಂದ ವೇಗವಾಗಿ ಬಂದು, ಲಾರಿ ಚಾಲಕನಿಗೆ ಸವರಿಕೊಂಡು ಹೋಗಿದ್ದ.

ಮೀನಿನ ಲಾರಿಯ ಪಾಶ್ವವೊಂದು ಲಾರಿ ಚಾಲಕನ ತಲೆಗೆ ಬಡಿದ ಪರಿಣಾಮ ತಲೆಯಿಂದ ಮೆದುಳು ಹೊರ ಬಂದಿದ್ದು ಸ್ಥಳದಲ್ಲೇ ಮೃತಪಟ್ಟಿದ್ದ. ಅಪಘಾತ ನಡೆಸಿದ ಮೀನಿನ ಲಾರಿ ಸ್ಥಳದಲ್ಲಿ ನಿಲ್ಲದೆ ಪರಾರಿಯಾಗಲು ಯತ್ನಿಸಿದಾಗ ಸ್ಥಳೀಯರು ಬೆನ್ನಟ್ಟಿ ಹಿಡಿದು ಲಾರಿ ಸಹಿತ ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದೇವೆ ಎಂಬುದಾಗಿ ಸ್ಥಳೀಯರು ತಿಳಿಸಿದ್ದಾರೆ.

ವರದಿ-ಸುರೇಶ್ ಎರ್ಮಾಳ್

Related posts

Leave a Reply