Header Ads
Breaking News

ಪಾದಚಾರಿಗೆ ಸ್ಕಾರ್ಪಿಯೋ ವಾಹನ ಢಿಕ್ಕಿ : ಸ್ಥಳದಲ್ಲೇ ಮೃತಪಟ್ಟ ಅಪರಿಚಿತ ವ್ಯಕ್ತಿ

ಪಾದಚಾರಿ ಅಪರಿಚಿತ ವ್ಯಕ್ತಿಯೊರ್ವರಿಗೆ ಸ್ಕಾರ್ಪಿಯೋ ವಾಹನ ಡಿಕ್ಕಿಯಾಗಿ ವ್ಯಕ್ತಿ ಮೃತ ಪಟ್ಟ ಘಟನೆ ಪಡುಬಿದ್ರೆಯಲ್ಲಿ ನಡೆದಿದೆ. ಪಡುಬಿದ್ರಿ ನಾಗರಾಜ ಎಸ್ಟೇಟ್ ಬಳಿ ರಸ್ತೆ ದಾಟುತ್ತಿದ್ದ ಸುಮಾರು ನಲ್ವತ್ತು ವರ್ಷ ವಯಸ್ಸಿನ ವ್ಯಕ್ತಿಗೆ ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನ ಡಿಕ್ಕಿಯಾಗಿದ್ದು ತಕ್ಷಣ ಗಾಯಾಳು ಸ್ಥಿತಿ ಗಮನಿಸಿದ ವಾಹನ ಸವಾರರು ಮಾನವೀಯತೆ ಮರೆತು ಉಡುಪಿ ಕಡೆಗೆ ವಾಹನ ಸಹಿತ ಪರಾರಿಯಾಗಿದ್ದಾರೆ. ಈ ಸಂದರ್ಭ ವಾಹನದ ನೊಂದಾವಣೆ ಸಂಖ್ಯೆಯನ್ನು ಸ್ಥಳೀಯರು ಗಮನಿಸಿದ್ದು ಪೊಲೀಸ್ರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪಡುಬಿದ್ರಿ ಪೊಲೀಸ್ರು ಶವವನ್ನು ಪಡುಬಿದ್ರಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.

Related posts

Leave a Reply

Your email address will not be published. Required fields are marked *