Header Ads
Breaking News

ಪಾದೂರು ಕಚ್ಚಾ ತೈಲ ಸಂಗ್ರಹಣಾ ಘಟಕ ಸಂತ್ರಸ್ತರಿಗೆ ಪರಿಹಾರ ಕೊಟ್ಟು ನಂತರ ಕಾಮಗಾರಿ ಆರಂಭಿಸಿ : ಜಿ.ಎ ಕೋಟೆಯಾರ್

ಪಾದೂರು ಕಚ್ಚಾ ತೈಲ ಸಂಗ್ರಹಣಾ ಘಟಕಕ್ಕೆ ಮೊದಲ ಹಂತದಲ್ಲಿ ಭೂಮಿ ಹಾಗೂ ಮನೆ ಕಳೆದುಕೊಂಡವರಿಗೆ ಪೂರ್ಣ ಪ್ರಮಾಣದ ಪರಿಹಾರ ಸಿಕ್ಕಿಲ್ಲ. ಹೀಗಿರುವಾಗ 2ನೇ ಹಂತದ ಕಾಮಗಾರಿಗೆ ಸಿದ್ದತೆ ನಡೆಯುತ್ತಿದೆ. ಸಂತ್ರಸ್ತರಿಗೆ ಮೊದಲು ನ್ಯಾಯಯುತ ಪರಿಹಾರ ಕೊಟ್ಟು ನಂತರ ಕಾಮಗಾರಿ ಆರಂಭಿಸಲಿ ಎಂದು ಮಾಸ್ ಇಂಡಿಯಾ ಎನ್.ಜಿ.ಒ ಅದ್ಯಕ್ಷ ಜಿ.ಎ ಕೋಟೆಯಾರ್ ಒತ್ತಾಯಿಸಿದ್ದಾರೆ.

ಕೊಟ್ಟು ನಂತರ ಕಾಮಗಾರಿ ಆರಂಭಿಸಲಿ ಎಂದು ಮಾಸ್ ಇಂಡಿಯಾ ಎನ್.ಜಿ.ಒ ಅದ್ಯಕ್ಷ ಜಿ.ಎ ಕೋಟೆಯಾರ್ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮೊದಲ ಹಂತದ ಯೋಜನೆಗೆ 120 ಕುಟುಂಬಗಳು ಭೂಮಿ ಕಳೆದುಕೊಂಡಿದೆ. ಕಲ್ಲುಬಂಡೆ ಸ್ಪೋಟದಿಂದ 68 ಮನೆಗಳಿಗೆ ಹಾನಿಯಾಗಿದೆ. ಇವರಿಗೆಲ್ಲ ನ್ಯಾಯಯುತ ಪರಿಹಾರ ವಿತರಿಸಬೇಕು. ಸಂತ್ರಸ್ತರ ಕುಟುಂಬದ ಸದಸ್ಯರಿಗೆ ಐಎಸ್ ಪಿಆರ್‌ಎಲ್ ಕಂಪೆನಿಯಲ್ಲಿ ಉದ್ಯೋಗ ನಿಡಬೇಕು ಎಂದು ಆಗ್ರಹಿಸಿದರು.
ಇದೀಗ 2ನೇ ಹಂತದ ಕಚ್ಚಾ ತೈಲ ಸಂಗ್ರಹಣಾ ಘಟಕದ ಕಾಮಗಾರಿಗೆ ಸಿದ್ದತೆಗಳು ನಡೆದಿದ್ದು 210 ಎಕರೆ ಪ್ರದೇಶವನ್ನು ಕೆಐ ಡಿಬಿ ಗುರುತಿಸಿದೆ. ಕಾಮಗಾರಿ ಆರಂಭಕ್ಕೂ ಮುನ್ನ ಸ್ಥಳಿಯರ ಒಪ್ಪಿಗೆ ಪಡೆಯಬೇಕು.ಭೂಮಿ ಮನೆ ಕಳೆದುಕೊಳ್ಳವವರಿಗೆ ಮಾರುಕಟ್ಟೆ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚು ಪರಿಹಾರ ನಿಡಬೇಕು ಎಂದು ಆಗ್ರಹಿಸಿದರು.

Related posts

Leave a Reply

Your email address will not be published. Required fields are marked *