Header Ads
Header Ads
Breaking News

ಪಾದೆಬೆಟ್ಟುವಿನಲ್ಲಿ ಒಂದು ಕೋಟಿ ರೂಪಾಯಿ ಕಾಮಗಾರಿಗೆ ಚಾಲನೆ

2017-18ನೇ ಸಾಲಿನ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯ ಒಂದು ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳಿಗೆ, ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾದೆಬೆಟ್ಟು ಸರ್ಕಾರಿ ಶಾಲಾ ಮೈದಾನದಲ್ಲಿ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಗುದ್ದಲಿ ಪೂಜೆ ನಡೆಸುವ ಮೂಲಕ ಚಾಲನೆ ನೀಡಿದ್ದಾರೆ.


ಈ ಸಂದರ್ಭ ಮಾದ್ಯಮಗಳೊಂದಿಗೆ ಮಾತನಾಡಿದ ಶಾಸಕ ಸೊರಕೆ, ಪಾದೆಬೆಟ್ಟು ಸರ್ಕಾರಿ ಶಾಲಾ ಮೈದಾನ ಸಮತ್ತಷ್ಟು ಸಹಿತ ಸುತ್ತಲ ರಸ್ತೆ ಅಭಿವೃದ್ಧಿ ಸಹಿತ, ವಿವಿಧ ಕಾಮಗಾರಿಗಳಿಗಾಗಿ ಗುದ್ದಲಿ ಪೂಜೆ ನಡೆಸಲಾಗಿದೆ. ಶಾಲಾ ಮೈದಾನದ ಅಭಿವೃದ್ಧಿಯಿಂದಾಗಿ ಸ್ಥಳೀಯ ಮಕ್ಕಳು ಸಹಿತ ಯುವಕ ಯುವತಿಯರ ಕ್ರೀಡಾಸಕ್ತಿಗೆ ಉತ್ತೇಜನ ನೀಡಿದಂತ್ತಾಗಿದ್ದು, ಗ್ರಾಮೀಣ ಪ್ರದೇಶದಿದಂಲೂ ಉತ್ತಮ ಕ್ರೀಡಾಪಟುಗಳು ಹೊರ ಹುಮ್ಮಲು ಸಾಧ್ಯ ಎಂದರು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ದಮಯಂತಿ ಅಮೀನ್, ತಾ.ಪಂ.ಸದಸ್ಯ ದಿನೇಶ್ ಕೋಟ್ಯಾನ್, ಭಾಸ್ಕರ್ ಪಡುಬಿದ್ರಿ, ನವೀನ್‌ಚಂದ್ರ ಶೆಟ್ಟಿ ಮುಂತಾದವರಿದ್ದರು.
ವರದಿ-ಸುರೇಶ್ ಎರ್ಮಾಳ್

Related posts

Leave a Reply