Header Ads
Header Ads
Breaking News

ಪಾದೆಬೆಟ್ಟು ಯುವಕ ರೈಲ್ವೆ ಹಳಿಯಲ್ಲಿ ಸಂಶಯಾಸ್ಪದ ಸಾವು. ಕಾಲು ಕಟ್ಟಿದ ಸ್ಥಿತಿಯಲ್ಲಿ ಶವ ಪತ್ತೆ. ಎರ್ಮಾಳು ರೈಲ್ವೆ ಸೇತುವೆಯಡಿಯಲ್ಲಿ ಪತ್ತೆಯಾದ ಶವ.

ಎರ್ಮಾಳು ಪೂಂದಾಡು ರೈಲ್ವೆ ಸೇತುವೆಯಡಿಯಲ್ಲಿ ಪಾದೆಬೆಟ್ಟುವಿನ ಯುವಕನೋರ್ವನ ಶವ ರೈಲು ಡಿಕ್ಕಿಯಾಗಿ ಬಹುತೇಕ ಜಖಂಗೊಂಡ ಕಾಲು ಕಟ್ಟಿದ ಸ್ಥಿತಿಯಲ್ಲಿ ಬುಧವಾರ ಮುಂಜಾನೆ ಪತ್ತೆಯಾಗಿದ್ದು ಅನೇಕ ಸಂಶಯಗಳನ್ನು ಹುಟ್ಟು ಹಾಕಿದೆ.ಮೃತ ಯುವಕ ಎರ್ಮಾಳು-ಪಾದೆಬೆಟ್ಟು ಗಡಿಭಾಗದ ನಿವಾಸಿ ಸುಬ್ರಹ್ಮಣ್ಯ ಆಚಾರ್ಯ(29) ಎಂದು ತಿಳಿದುಬಂದಿದೆ. ಮರದ ಕೆಲಸ ಮಾಡಿಕೊಂಡಿದ್ದ ಸುಬ್ರಹ್ಮಣ್ಯ ಆಚಾರ್ಯ ತನ್ನ ಹಾಸಿಗೆಯಲ್ಲಿದ್ದ ತಂದೆ-ತಾಯಿ ಹಾಗೂ ಮನೆಯಲ್ಲಿರುವ ಸಹೋದರಿಯರ ಜೀವನಕ್ಕೆ ಆಧಾರವಾಗಿದ್ದ, ಇದೀಗ ನಾಲ್ಕು ತಿಂಗಳ ಹಿಂದೆ ಸಂಭವಿಸಿದ ಬೈಕ್ ಅಪಘಾತವೊಂದರಲ್ಲಿ ಕಾಲು ಜಖಂ ಮಾಡಿಕೊಂಡು ನಡೆಯಲಾರದ ಸ್ಥಿತಿಯಲ್ಲಿ ಮನೆಯಲ್ಲೇ ಇದ್ದ.ಇದೀಗ ಮುಂಜಾನೆ ಕಟ್ಟಿದ ಕಾಲು ಹಾಗೂ ರೈಲ್ವೆ ಹಳಿಯ ಕೊಕ್ಕೆಗೆ ಮತ್ತೊಂದು ಹಗ್ಗವನ್ನು ಕಟ್ಟಲಾಗಿದ್ದು ಇದು ಕೈಗೆ ಕಟ್ಟಿದ ಹಗ್ಗವಾಗಿರ ಬಹುದೆಂಬ ಶಂಕೆ ವ್ಯಕ್ತವಾಗಿದೆ, ಮನೆಮಂದಿ ಸಂಶಯ ವ್ಯಕ್ತ ಪಡಿಸುವಂತೆ ನಾಲ್ಕು ತಿಂಗಳಿಂದ ಹಾಸಿಗೆಯಲ್ಲಿದ್ದ ಈತ ಗುಣಮುಖನಾಗುತ್ತಿರುವ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇಲ್ಲ.ಈತನನ್ನು ಮನೆಯಿಂದ ಬೈಕಿನಲ್ಲಿ ರಾತ್ರಿ ಕರೆದುಕೊಂಡು ಹೋದವರು ಯಾರು..? ಹೆಚ್ಚು ದೂರ ನಡೆಯಲಾಗದ ಈತ ರೈಲು ಡಿಕ್ಕಿಯಾದ ಪ್ರದೇಶಕ್ಕೆ ಹೋಗಲು ಸಾಧ್ಯವೇ ಇಲ್ಲದ ಸ್ಥಿತಿ.. ಕಾರಣ ಆ ಪ್ರದೇಶಕ್ಕೆ ಹೋಗ ಬೇಕಾದರೆ ಬಹಳಷ್ಟು ದೂರ ಸಾಗಿ ಅಲ್ಲಿಂದ ರೈಲ್ವೆ ಹಳಿಗೆ ಇಳಿದು ಸುಮಾರು 800 ಮೀಟರ್ ನಡೆಯ ಬೇಕಾಗಿದ್ದು, ಈ ನಡೆಗೆ ಆತನ ಕಾಲು ನೋವಿನ ಸ್ಥಿತಿಯಲ್ಲಿ ಅಸಾಧ್ಯ ಎಂಬ ಮಾತು ಕೂಡಾ ಕೇಳಿ ಬರುತ್ತಿದೆ. ಒಟ್ಟಾರೆಯಾಗಿ ಈ ಸಾವು ಆತ್ಮಹತ್ಯೆಯೋ ಇಲ್ಲ ವ್ಯವಸ್ಥಿತ ಕೊಲೆಯೋ ಎಂಬುದು ಪೊಲೀಸ್ ತನಿಖೆಯಿಂದಷ್ಟೇ ತಿಳಿಯ ಬೇಕಾಗಿದ್ದು, ಪ್ರಮುಖವಾಗಿ ಈತನನ್ನು ರಾತ್ರಿ ಹೊತ್ತು ಮನೆಯಿಂದ ಬೈಕಿನಲ್ಲಿ ಸಾಗಿಸಿದವರ್‍ಯಾರು..? ಈತನ ಮೊಬೈಲ್ ನಾಪತ್ತೆಯ ಹಿಂದೆ ಏನಿದೆ ಎಂಬುದು ತಿಳಿಯುವ ಮೂಲಕ ಪ್ರಕರಣದ ಸತ್ಯಾಸತ್ಯತೆಗಳು ಬಿಚ್ಚಿಕೊಳ್ಳಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

Related posts

Leave a Reply