Header Ads
Breaking News

ಪಾನಮತ್ತ ಕೂಲಿ ಕಾರ್ಮಿಕ ದಂಪತಿಯಿಂದ ಮಕ್ಕಳ ಮೇಲೆ ಹಲ್ಲೆ-ಪುತ್ತೂರಿನಲ್ಲಿ ನಡೆದ ಅಮಾನವೀಯ ಘಟನೆ

 ಪುತ್ತೂರು : ಇಬ್ಬರು ಕೂಲಿ ಕಾರ್ಮಿಕ ದಂಪತಿಗಳು ತಮ್ಮ ಮೂವರು ಮಕ್ಕಳಿಗೆ ಪುತ್ತೂರಿನ ದರ್ಬೆ ವೃತ್ತದ ಸಮೀಪ ಇರುವ ಬಸ್ ನಿಲ್ದಾಣದ ಬಳಿ ಹಿಗ್ಗಾಮುಗ್ಗಾ ಥಳಿಸಿದ ಪ್ರಕರಣ ಮತ್ತು ಆ ಸಂತೃಸ್ತ ಮಕ್ಕಳನ್ನು ಪುತ್ತೂರು ರೋಟರಿ ಯುವ ಇದರ ಪ್ರಮುಖರು ಚೈಲ್ಡ್ ಕೇರ್ ಸೆಂಟರ್‌ಗೆ ಸೇರಿಸಿದ ಘಟನೆ ನಡೆದಿದೆ. ಈ ಮೂಲಕ ರೋಟರಿ ಯುವ ತಂಡವು ಮಕ್ಕಳಿಗೆ ಹೊಸ ಬೆಳಕು ನೀಡಿದೆ.

ಸುಮಾರು ಎಂಟು ಗಂಟೆಯ ಸುಮಾರಿಗೆ ಪುತ್ತೂರಿನ ದರ್ಬೆ ವೃತ್ತದ ಸಮೀಪ ಇರುವ ಬಸ್ ನಿಲ್ದಾಣಕ್ಕೆ ಎರಡು ಕೂಲಿ ಕಾರ್ಮಿಕ ದಂಪತಿಗಳು ತಮ್ಮ ಮೂವರು ಮಕ್ಕಳೊಂದಿಗೆ ಆಗಮಿಸಿದ್ದಾರೆ. ದಂಪತಿಗಳು ಪಾನಮತ್ತರಾಗಿದ್ದು, ಯಾವೊದೋ ಕ್ಷುಲಕ ನೆಪ ಒಡ್ಡಿ ತಮ್ಮ ಜೊತೆ ಇದ್ದ 12 ವರ್ಷದ ಗಂಡು ಮಗು, ಆರು ವರ್ಷದ ಹೆಣ್ಣು ಮಗು ಹಾಗೂ ಆರು ತಿಂಗಳ ಹೆಣ್ಣು ಮಗುವಿಗೆ ಹೊಡೆಯಲು ಆರಂಭಿಸಿದ್ದಾರೆ. ಇದನ್ನು ಗಮನಿಸಿದ ಆಸುಪಾಸಿನ ಸಾರ್ವಜನಿಕರು ಮಕ್ಕಳಿಗೆ ದಂಪತಿ ಹೊಡೆಯದಂತೆ ತಡೆಯಲು ಯತ್ನಿಸಿದ್ದಾರೆ. ಅದರೆ ಕುಡಿತದ ಮತ್ತಿನಲ್ಲಿದ್ದ ಈ ದಂಪತಿ ಯಾರ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಆರು ತಿಂಗಳ ಮಗುವಿನ ಮೇಲೂ ಯಾವುದೇ ಕರುಣೆಯಿಲ್ಲದೇ ಹೊಡೆಯುತಿದ್ದ ದೃಶ್ಯ ಅಲ್ಲಿ ನೆರೆದಿದ್ದ ಸಾರ್ವಜನಿಕರ ಕರುಳು ಕಿವುಚುವಂತಿತ್ತು.
ಸಾರ್ವಜನಿಕರೂ ಎಷ್ಟು ವಿನಂತಿಸಿದರೂ ಮಕ್ಕಳ ಹೆತ್ತವರು ಹೊಡೆಯುವುದನ್ನು ನಿಲ್ಲಿಸದೇ ಇದ್ದಾಗ ಹಾಗೂ ಆರು ತಿಂಗಳ ಪುಟ್ಟ ಮಗುವಿನ ಜೀವಕ್ಕೆ ಅಪಾಯ ಸಂಭವಿಸಬಹುದು ಎಂಬ ಆತಂಕ ಎದುರಾದಾಗ ರೋಟರಿ ಕ್ಲಬ್ ಪುತ್ತೂರು ಯುವ ಇದರ ಸದಸ್ಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ರಾತ್ರಿ ಎರಡು ಗಂಟೆಯಾದರೂ, ಮಕ್ಕಳಿಗೆ ಸೂಕ್ತ ರಕ್ಷಣೆ ಸಿಗದ ಹಿನ್ನಲೆಯಲ್ಲಿ ಪುತ್ತೂರು ಮಹಿಳಾ ಠಾಣೆಗೆ ಮಾಹಿತಿಯೂ ನೀಡಲಾಯಿತು. ಪುತ್ತೂರು ಗ್ರಾಮಾಂತರ ಠಾಣೆ ಎಸ್ ಐ ಉದಯ ರವಿಯವರು ಎರಡು ಗಂಟೆಗಳ ಕಾಲ ಸ್ಥಳದಲ್ಲಿದ್ದೂ ಮಕ್ಕಳ ರಕ್ಷಣೆಗೆ ರೋಟರಿ ಕ್ಲಬ್ ಪುತ್ತೂರು ಯುವಕ್ಕೆ ಮಾರ್ಗದರ್ಶನ ನೀಡಿದ್ದಾರೆ.
ರೋಟರಿ ಕ್ಲಬ್ ಪುತ್ತೂರು ಯುವ ಇದರ ಅಧ್ಯಕ್ಷರಾದ ಹರ್ಷ ರೈ ಮಾಡಾವು,ಕಾರ್ಯದರ್ಶಿಗಳಾದ ಉಮೇಶ್ ನಾಯಕ್ ಹಾಗೂ ಇತರರು ಚೈಲ್ಡ್ ಹೆಲ್ತ್ ಕೇರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಿ ಮಕ್ಕಳಿಗೆ ಸೂಕ್ತ ರಕ್ಷಣೆ, ಉತ್ತಮ ವಿದ್ಯಾಭ್ಯಾಸ , ಊಟೋಪಚರ, ವಸತಿ ವ್ಯವಸ್ಥೆಯ ಜೊತೆಗೆ ಸುಂದರ ಭವಿಷ್ಯ ರೂಪುಗೊಳ್ಳುವ ವಾತಾವರಣ ಸೃಷ್ಟಿಸಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *