Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಪಾನೀರ್‌ಚರ್ಚ್‌ನ ವಾರ್ಷಿಕ ಉತ್ಸವ ಪ್ರಯುಕ್ತ ಬಲಿಪೂಜೆ ಶಾಂತಿ, ಸೌಹಾರ್ದತೆಯೇ ಹಬ್ಬದ ಸಂದೇಶ ಫಾದರ್ ಡೆನ್ನಿಸ್ ಸುವಾರಿಸ್

ಸಮಾಜದಲ್ಲಿ ಶಾಂತಿ, ಸಮಾಧಾನ, ಸೌಹಾರ್ದತೆ ನೆಲೆ ನಿಲ್ಲುವಂತಾಗಲು ಪ್ರತಿಯೊಬ್ಬರು ಶ್ರಮಿಸಬೇಕಿದೆ, ಇದು ಧಾರ್ಮಿಕ ಹಬ್ಬದ ಸಂದೇಶವೂ ಆಗಿದೆ ಎಂದು ಪಾನೀರ್ ದಯಾಮಾತೆ ಮೆರ್ಸಿಯಮ್ಮನವರ ಇಗರ್ಜಿಯ ಧರ್ಮಗುರು ಫಾ.ಡೆನ್ನಿಸ್ ಸುವಾರೀಸ್ ಅಭಿಪ್ರಾಯಪಟ್ಟರು.

ಮಾತೆ ಮೆರ್ಸಿಯಮ್ಮ ಇಗರ್ಜಿಯ ವಾರ್ಷಿಕ ಉತ್ಸವ ಪ್ರಯುಕ್ತ ಭಾನುವಾರ ದೇರಳಕಟ್ಟೆಯಿಂದ ಚರ್ಚ್‌ವರೆಗೆ ಪವಿತ್ರ ಪ್ರಸಾದದ ಮೆರವಣಿಗೆ ಬಳಿಕ ನಡೆದ ಬಲಿಪೂಜೆಯಲ್ಲಿ ಅವರು ಮಾತನಾಡಿದರು.
ಚರ್ಚ್‌ನ ವಾರ್ಷಿ ಹಬ್ಬದ ಬಲಿಪೂಜೆ ಪ್ರಯುಕ್ತ ಶಾಂತಿಯ ಸಂದೇಶ ಸಾರಲು ಮೆರವಣಿಗೆ ನಡೆಸಲಾಗಿದೆ, ಭಾಗವಹಿಸಿರುವ ಪ್ರತಿಯೊಬ್ಬರ ಮೇಲೂ ದೇವನ ಶಾಂತಿ, ಸಂದೇಶ ವರ್ಷಿಸಲಿ ಎಂದು ಹಾರೈಸಿದರು.

ಜಪ್ಪು ಸಂತ ಜೋಸೆಫ್ ಸೆಮಿನರಿಯ ರೆಕ್ಟರ್ ಫಾ.ಜೋಸೆಫ್ ಮಾರ್ಟಿಸ್, ಮಿಲಾಗ್ರೀಸ್ ಕಾಲೇಜಿನ ಪ್ರಾಂಶುಪಾಲ ಫಾ.ಮೈಕೆಲ್ ಸಾಂತುಮಾಯರ್, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಎಲಿಯಾಸ್ ಡಿಸೋಜ, ಕಾರ್ಯದರ್ಶಿ ಡೆನ್ನಿಸ್ ಗೊನ್ಸಾಲೀಸ್, ಮಾಜಿ ಉಪಾಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ, ಧರ್ಮಭಗಿನಿಯರು ಉಪಸ್ಥಿತರಿದ್ದರು.

Related posts

Leave a Reply