Header Ads
Header Ads
Breaking News

ಪಾನೇಲದಲ್ಲಿರುವ ಸಾರ್ವಜನಿಕ ಮೈದಾನ ನಿರ್ಮಾಣ ಗ್ರಾಮ ವಿಕಾಸ ಯೋಜನೆಯಿಂದ ಅನುದಾನ ಬಿಡುಗಡೆ ಸಚಿವ ಯು.ಟಿ ಖಾದರ್ ಹೇಳಿಕೆ

ಪಾನೇಲದಲ್ಲಿರುವ ಸಾರ್ವಜನಿಕ ಮೈದಾನ ಸುಸಜ್ಜಿತ ಆಟದ ಮೈದಾನ ಹಾಗೂ ಇತರ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಮಾಡಲು ಗ್ರಾಮ ವಿಕಾಸ ಯೋಜನೆಯ ಒಂಬತ್ತು ಲಕ್ಷ ಅನುದಾನ ಮೀಸಲಿಡಲಾಗುವುದು ಎಂದು ಆಹಾರ ಸಚಿವ ಯು.ಟಿ.ಖಾದರ್ ಹೇಳಿದರು.

ಪಜೀರು ಗ್ರಾಮ ಪಾನೇಲ ಹಾಗೂ ಇತರ ಭಾಗಗಳಲ್ಲಿ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಪಜೀರು ಗ್ರಾಮದ ಬಹುತೇಕ ರಸ್ತೆಗಳು ಅಭಿವೃದ್ಧಿಗೊಂಡಿದೆ, ಪಾನೇಲ ರಸ್ತೆ ದುರಸ್ತಿ ಬಗ್ಗೆ ಬೇಡಿಕೆ ಇತ್ತು. ಈ ರಸ್ತೆ ಪಾವೂರು ಗ್ರಾಮದ ಇನೋಳಿ, ಬೋಳಿಯಾರ್ ಗ್ರಾಮದ ಧರ್ಮನಗರಕ್ಕೂ ನೇರ ಸಂಪರ್ಕ ಕಲ್ಪಿಸುತ್ತದೆ. ಹಿನ್ನೆಲೆಯಲ್ಲಿ 90 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದ್ದು, ಸಂಪೂರ್ಣ ಕಾಂಕ್ರೀಟ್ ರಸ್ತೆಯಾಗಲಿ, ಅಲ್ಲದೆ ಅಡ್ಡರಸ್ತೆಗಳಿಗೂ ಶಾಸಕರ ಅನುದಾನದಲ್ಲಿ ಐದು ಲಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಮೂರು ಲಕ್ಷ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ, ತಾಲೂಕು ಪಂಚಾಯಿತಿ ಸದಸ್ಯ ಅಬ್ದುಲ್ ಜಬ್ಬಾರ್ ಬೋಳಿಯಾರ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಕಾಜವ, ಎಪಿಎಂಸಿ ಮಾಜಿ ಸದಸ್ಯ ಉಮ್ಮರ್ ಪಜೀರು, ಮತ್ತಿತರರು ಉಪಸ್ಥಿತರಿದ್ದರು.
ವರದಿ: ಆರೀಫ್ ಉಳ್ಳಾಲ

Related posts

Leave a Reply