Header Ads
Breaking News

ಪಾರ್ಕ್ ಮಾಡಿದ್ದ ಕಾರಿನ ಗಾಜು ಪುಡಿಗೈದು 15 ಲಕ್ಷ ರೂ. ದರೋಡೆ : ಮಂಗಳೂರು ನಗರದ ಚಿಲಿಂಬಿಯಲ್ಲಿ ನಡೆದ ಘಟನೆ

ಕಾರ್‍ನ ಗ್ಲಾಸ್‍ನ್ನು ಒಡೆದು ಪಾರ್ಕ್ ಮಾಡಿದ್ದ ಕಾರಿನೊಳಗಿದ್ದ ಸುಮಾರು 15 ಲಕ್ಷ ರೂ. ನಗದನ್ನು ದೋಚಿ ಪರಾರಿಯಾದ ಘಟನೆ ಮಂಗಳೂರು ನಗರದ ಚಿಲಿಂಬಿಯಲ್ಲಿ ನಡೆದಿದೆ. ರಿಝ್ವಾನ್ ಎಂಬವರಿಗೆ ಸೇರಿದ ಕಾರಿನ ಗಾಜನ್ನು ಒಡೆದು ಕಳ್ಳತನ ಮಾಡಲಾಗಿದೆ. ರಿಝ್ವಾನ್ ಅವರು ಕೆಎ 03ಎಂವೈ 4390 ನೋಂದಣಿ ಸಂಖ್ಯೆಯ ಕಪ್ಪುಬಣ್ಣದ ಹುಂಡೈ ಐ10 ಕಾರಿನಲ್ಲಿ ಚಿಲಿಂಬಿಯ ಸೌತ್ ಇಂಡಿಯನ್ ಬ್ಯಾಂಕ್‍ಗೆಂದು ಬಂದಿದ್ದರು. ಕಾರಿನಲ್ಲಿ 15 ಲಕ್ಷ ರೂ. ನಗದು ಇಟ್ಟು ಬ್ಯಾಂಕಿಗೆ ತೆರಳಿದ್ದರು. ಈ ಸಂದರ್ಭ ಹೆಲ್ಮೆಟ್ ಧರಿಸಿಕೊಂಡು ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಾರಿನ ಹಿಂಬದಿ ಸೀಟಿನ ಕಿಟಕಿ ಗಾಜು ಪುಡಿಗೈದು ಕಾರಿನೊಳಗಿಡಲಾಗಿದ್ದ 15 ಲಕ್ಷ ಹಣವನ್ನು ದರೋಡೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಂಗಳೂರು ನಗರ ಪೊಲೀಸ್ ಉಪ ಆಯುಕ್ತ ಲಕ್ಷ್ಮೀಗಣೇಶ್, ಪ್ರಕರಣದ ತನಿಖೆಗಾಗಿ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಫೂಟೇಜ್‍ಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಆದಷ್ಟು ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. 

Related posts

Leave a Reply

Your email address will not be published. Required fields are marked *