Header Ads
Header Ads
Breaking News

ಪಾರ್ಶ್ವವಾಯು ಪೀಡಿತ ಮಹಿಳೆ ಹಾಗೂ ದಿವ್ಯಾಂಗ ಚೇತನ ಬಾಲಕಿ, ನೆರೆಯ ರಾಜ್ಯದಲ್ಲಿ ಆಶ್ರಯ ಒದಗಿಸಿದ ಸಾಮಾಜಿಕ ಕಾರ್ಯಕರ್ತರು

ಉಡುಪಿ ಸಮೀಪದ ಬಲಾಯಿಪಾದೆಯ ರಾಷ್ಟೀಯ ಹೆದ್ದಾರಿ ೬೬ರ ಸನಿಹ ಬಾಡಿಗೆ ಮನೆಯೊಂದರಲ್ಲಿ ಬಾಹ್ಯ ಪ್ರಪಂಚದ ಅರಿವಿಲ್ಲದೆ ನಾಗರಿಕ ಸಮಾಜದಲ್ಲಿ ತೀರ ಅಸಾಹಯಕರಾಗಿ ಬದುಕು ಸಾಗಿಸುತ್ತಿದ್ದ ಅಂಗ ನೂನ್ಯತೆ ಹೊಂದಿದ ಮಹಿಳೆ ಮತ್ತು ದಿವ್ಯಾಂಗ ಚೇತನ ಬಾಲಕಿಯನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಸಾಮಾಜಿಕ ಕಾರ್ಯಕರ್ತರ ಸಹಕಾರದೊಂದಿಗೆ ಮಂಜೇಶ್ವರದ ಶ್ರೀ ಸಾಯಿ ನಿಕೇತನ ಸೇವಾಶ್ರಮದಲ್ಲಿ ಪುರ್ನವಸತಿ ಕಲ್ಪಿಸಿದ್ದಾರೆ.
ಈ ಕುಟುಂಬದ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು, ಸಾಮಾಜಿಕ ಜಾಲಗಳಲ್ಲಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿ ಸಂಚಲನ ಮೂಡಿಸಿತ್ತು. ಅಲೆವೂರು ಪಂಚಾಯತ್ ಸದಸ್ಯೆ ಶ್ರೀಮತಿ ಪ್ರೇಮ ಅವರ ಮೂಲಕ ಸಮಾಜಸೇವಕ ವಿಶು ಶೆಟ್ಟಿ ಅವರಿಗೆ ಕುಟುಂಬದ ದಯನೀಯ ಪರಿಸ್ಥಿತಿ ಗಮನಕ್ಕೆ ಬಂದಿತ್ತು. ಅವರು ಸ್ಥಳಕ್ಕೆ ಭೇಟಿ ನೀಡಿ, ೫೫ ವರುಷದ ಲೀಲಾ ಸೆಬಾಸ್ಟನ್ ಮತ್ತು ಆಕೆಯ ಸಾಕು ಮಗಳು ೧೬ರ ಥೆರೆಸಾ ಅವರ ಚಿಂತಾಜನಕ ಸಂಗತಿ ಕಣ್ಣಾರೆ ಕಂಡು ಬಂದಾಗ ಆ ಕುಟುಂಬಕ್ಕೆ ಪುರ್ನವಸತಿಯ ಅವಶ್ಯಕತೆಗಾಗಿ ಕಾನೂನು ಹೋರಾಟದ ಜೋತೆಗೆ ಸಮಾಜದ ಗಮನ ಸೆಳೆಯಲು ಮಾಧ್ಯಮದ ಮುಖಾಂತರ ನೆರವು ಯಾಚಿಸಿದ್ದರು. ಮತ್ತು ದಿವ್ಯಾಂಗ ಚೇತನ ಬಾಲಕಿಯ ವಿಷಯದ ಕುರಿತು ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರಾದ ಬಿ. ಕೆ. ನಾರಾಯಣ್ ಅವರಿಗೆ ಮನವಿಯನ್ನು ಸಲ್ಲಿಸಿದ್ದರು. ಮಾಧ್ಯಮದ ಮುಖಾಂತರ ವಿಷಯ ತಿಳಿದ ಕೇರಳ ರಾಜ್ಯದ ಮಂಜೇಶ್ವರದ ದೈಗುಳಿ ಶ್ರೀಸಾಯಿ ನಿಕೇತನ ಸೇವಾಶ್ರಮದ ಉಸ್ತುವಾರಿಯಾದ ಡಾ. ಉದಯ್ ಕುಮಾರ್ ಅವರು ಇವರನ್ನು ಸಂಪರ್ಕಿಸಿ ಯಾವುದೇ ಫಲಾಪೇಕ್ಷೆ ಇಲ್ಲದೆ ಸಂತ್ರಸ್ಥರಿಗೆ ಆಶ್ರಯ ನೀಡುವುದಾಗಿ ಭರವಸೆ ನೀಡಿದರು. ಮಕ್ಕಳ ರಕ್ಷಣಾ ಘಟಕದಿಂದ ಆಶ್ರಮಕ್ಕೆ ಸೇರಿಸಲು ಬಾಲಕಿಗೆ ಶಿಪಾರಸ್ಸು ಪತ್ರ ದೊರೆಯಿತು.
ಉಡುಪಿ ಜಿಲ್ಲೆಯಲ್ಲಿ ಸರಕಾರದ ಉಸ್ತುವಾರಿಯಲ್ಲಿ ನಿರ್ಗತಿಕರಾಗಿ ನಡೆಸಲ್ಪಡುವ ಪುರ್ನವಸತಿ ಕೇಂದ್ರ ಇಲ್ಲದ ಕಾರಣ, ಅನಿವಾರ್ಯ ಪರಿಸ್ಥಿತಿಯಲ್ಲಿ ಸಮಾಜ ಸೇವಕ ವಿಶು ಶೆಟ್ಟಿ, ತಾರಾನಾಥ್ ಮೇಸ್ತ ಶಿರೂರು ಹಾಗೂ ಬೈಲೂರು ಕ್ರೀಸ್ತಜ್ಯೋತಿ ಚರ್ಚಿನ ಆಡಳಿತ ಮಂಡಳಿಯ ಸದಸ್ಯರಾದ ಜೋಸೆಫ್ ಏಸ್ ಸೊನ್ಸ್, ವಿಕ್ಟೋರಿಯಾ ಪ್ರೇಮಕುಮಾರಿ, ಮೇ-೨೮ ಭಾನುವಾರದ ದಿನ ಬೆಳಿಗ್ಗೆ ೧೧ ಗಂಟೆಗೆ ಜಂಟಿ ಕಾರ್ಯಚರಣೆ ನೆಡೆಸಿ ಅಸಾಹಯಕರನ್ನು ವಿಶು ಶೆಟ್ಟಿ ಅವರ ವಾಹನದಲ್ಲಿ ಕೇರಳದ ಮಂಜೇಶ್ವರದ ಆಶ್ರಮಕ್ಕೆ ಸಾಗಿಸಿ, ಮಧ್ಯಾಹ್ನ ೨ ಗಂಟೆಗೆ ದಾಖಲಿಸಿದ್ದಾರೆ.

Related posts

Leave a Reply