Header Ads
Breaking News

ಪಾಲಡ್ಕದಲ್ಲಿ 1.20 ಕೋ ವೆಚ್ಚದ ರಸ್ತೆಗೆ ಗುದ್ದಲಿಪೂಜೆ

ಮೂಡುಬಿದಿರೆ : ಗ್ರಾಮೀಣ ಪ್ರದೇಶದ ಕಟ್ಟ ಕಡೆಯ ವ್ಯಕ್ತಿಗಳಿಗೂ ಮೂಲಭೂತ ಸೌಕರ್ಯಗಳು ತಲುಪಬೇಕು. ಈ ನಿಟ್ಟಿನಲ್ಲಿ ಕುಡಿಯುವ ನೀರು, ರಸ್ತೆಗಳ ಸಹಿತ ಗ್ರಾಮೀಣ ಪ್ರದೇಶದ ಇತರ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವುದು ತನ್ನ ಕನಸಾಗಿದೆ ಎಂದು ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಅವರು ಪುತ್ತಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರದ ಪಾಲಡ್ಕ ಗ್ರಾ.ಪಂ ವ್ಯಾಪ್ತಿಯ ಕಡಂದಲೆ ಗ್ರಾಮದ ಸುಬ್ರಹ್ಮಣ್ಯ ದೇವಸ್ಥಾನದಿಂದ ಬೊಮ್ಮಲಗುಡ್ಡೆ-ಪೆರ್ಲಪಾಡಿ ಮುರ್ತುಗುಡ್ಡೆ ರಸ್ತೆ ಅಭಿವೃದ್ಧಿ (40ಲಕ್ಷ ) ಉಲ್ಲನಡ್ಕ-ಕಂಗ್ಲಾಯಿ ರಸ್ತೆ ಅಭಿವೃದ್ಧಿ (15ಲಕ್ಷ), ಕಾಂತಾವರ ನಾಣಿಲ್ ಬೈಲ್ ಕೂಡುರಸ್ತೆ ಅಭಿವೃದ್ಧಿ (25ಲಕ್ಷ) ಹಾಗೂ ಶೆಡ್ಯ ಶೆಟ್ಟಿಬೆಟ್ಟು ರಸ್ತೆ ಅಭಿವೃದ್ಧಿ (40ಲಕ್ಷ) ಒಟ್ಟು 1. 20ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿರುವ ರಸ್ತೆಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ಈ ಸಂದರ್ಭ ಜಿ.ಪಂ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್ ಆಳ್ವ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅಜೇಯ್ ರೈ, ಪ್ರಧಾನ ಕಾರ್ಯದರ್ಶಿ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *