Header Ads
Breaking News

ಪಾಲಿಕೆಗೆ ಸಾರ್ವಜನಿಕ ಪ್ರವೇಶ ನಿಷೇಧ : ಮಾರ್ಚ್ 31ರ ತನಕ ತುರ್ತು ಸೇವೆಗೆ ಮಾತ್ರ ಅವಕಾಶ

ದ್ವಾರದಲ್ಲಿ ನೇತಾಡುತ್ತಿದೆ ನೋ ಎಂಟ್ರಿ ಬೋರ್ಡ್, ಅರ್ಧ ಮುಚ್ಚಿರುವ ಶಟರ್, ಬಂದ ಸಾರ್ವಜನಿಕರನ್ನು ಹಿಂದಕ್ಕೆ ಕುಳುಹಿಸುತ್ತಿರುವ ಕಾವಲು ಸಿಬ್ಬಂದಿ, ತುರ್ತು ಸೇವೆಗಾಗಿ ಹೊರಭಾಗದಲ್ಲಿ ಕೌಂಟರ್, ಈ ಎಲ್ಲಾ ದೃಶ್ಯ ಕಂಡುಬಂದಿದ್ದು ಸದಾ ಸಾರ್ವಜನಿಕರಿಂದ ತುಂಬಿರುತ್ತಿದ ಮಂಗಳೂರು ಮಹಾನಗರ ಪಾಲಿಕೆಯ ಮುಂಭಾಗದಲ್ಲಿ. ಕೊರೊನಾ ವೈರಸ್ ಇಡೀ ಪ್ರಪಂಚದ ಸಾವಿನ ಖದವನ್ನು ತಟ್ಟಿದೆ. ಇನ್ನೂ ಈ ಹಿನ್ನಲೆ ಇಡೀ ವಿಶ್ವವೇ ಜಾಗೃತಿಯನ್ನು ಮೂಡಿಸುತ್ತಿದೆ. ಸದಾ ಸಾರ್ವಜನಿಕರಿಂದ ತುಂಬಿರುತ್ತಿದ ಮಂಗಳೂರು ಮಹಾನಗರ ಪಾಲಿಕೆಗೂ ಕೂಡ ಕರೊನಾ ವೈರಸ್ ಬಿಸಿ ತಟ್ಟಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತದ ಆದೇಶದ ಮೇರಗೆ ಮಾರ್ಚ್ 31ರ ತನಕ ತುರ್ತು ಸೇವೆಗಳಾದ ಜನನ-ಮರಣ ಪ್ರಮಾಣಪತ್ರ, ಉದ್ದಿಮೆ ಪರವಾನಿಗೆ, ಆರೋಗ್ಯ ಇಲಾಖೆ, ಒಳಚರಂಡಿ, ಕುಡಿಯುವ ನೀರು ಮತ್ತು ಬೀದಿದೀಪ ವ್ಯವಸ್ಥೆಗಳಿಗೆ ಸಂಬಂಧಿಸಿದ ಕೆಲಸಗಳಿ ಮಾತ್ರ ಅವಕಾಶವಿದೆ ಸಾರ್ವಜನಿಕರ ಪ್ರವೇಶವನ್ನು ನಿಷೇದಿಸಲಾಗಿದೆ.

Related posts

Leave a Reply

Your email address will not be published. Required fields are marked *