Header Ads
Header Ads
Breaking News

ಪಾಲಿಕೆಯ ಕಾರ್ಮಿಕರನ್ನು ಹತ್ತು ದಿನದೊಳಗೆ ಕಾಯಂಗೊಳಿಸಿ, ದಸಂಸ ಸಂಚಾಲಕ ಜಗದೀಶ್ ಪಾಂಡೇಶ್ವರ್ ಎಚ್ಚರಿಕೆ

ಪಾಲಿಕೆ ವ್ಯಾಪ್ತಿಯ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ೧೫೬ ಮಂದಿ ಒಳಚರಂಡಿಯ ವಿಭಾಗದ ಕಾರ್ಮಿಕರನ್ನು ೧೦ ದಿನದೊಳಗೆ ಖಾಯಂಗೊಳಿಸಬೇಕು, ಇಲ್ಲದಿದ್ರೆ ಪಾಲಿಕೆ ಮುಂಭಾಗದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತೆ ಅಂತಾ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಜಗದೀಶ್ ಪಾಂಡೇಶ್ವರ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯ ವಿವಿಧ ವಿಭಾಗದಲ್ಲಿ ದುಡಿಯುತ್ತಿರುವ ಹೊರ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಆಯುಕ್ತರ ಕಾರ್ಮಿಕರ ಬಗ್ಗೆ ಇಚ್ಚಾಶಕ್ತಿ ತೋರಿಸಬೇಕು. ಇಲ್ಲದೇ ಹೋದರೆ ಪಾಲಿಕೆ ಮುಂಭಾಗದಲ್ಲಿ ವಿವಿಧ ದಲಿತರ ಸಂಘಟನೆ ಜೊತೆಗೂಡಿ ಪ್ರತಿಭಟನೆ ನಡೆಸಲಾಗುವುದು. ಇದಕ್ಕೆ ಪಾಲಿಕೆ ಮೇಯರ್ ಹಾಗೂ ಆಯುಕ್ತ ಜವಾಬ್ದಾರರಾಗಿರುತ್ತಾರೆ ಅಂತಾ ಅವರು ಹೇಳಿದರು.

Related posts

Leave a Reply