Header Ads
Header Ads
Breaking News

ಪಾಳು ಬಿದ್ದಿರುವ ಕಟ್ಟಡ. ಒಳ ಪ್ರವೇಶಿಸಲಾಗದ ಸ್ಥಿತಿಯಲ್ಲಿ ಬೆಳೆದು ನಿಂತ ಪೊದೆಗಳು. ಹಾವು, ಚೇಳು ವಿಷಜಂತುಗಳಿಗೆ ಆವಾಸ ಸ್ಥಾನ.

ಬಂಟ್ವಾಳ: ಪಾಳು ಬಿದ್ದಿರುವ ಕಟ್ಟಡ, ಒಳ ಪ್ರವೇಶಿಸಲಾಗದ ಸ್ಥಿತಿಯಲ್ಲಿ ಬೆಳೆದು ನಿಂತಿರುವ ಪೊದೆಗಳು, ಹಾವು ಚೇಳು ಮೊದಲಾದ ವಿಷಜಂತುಗಳಿಗೆ ಆವಾಸ ಸ್ಥಾನ… ಇದು ಪಾಳು ಬಿದ್ದ ಶಾಲೆಯೊಂದರ ಸದ್ಯ ಸ್ಥಿತಿ! ಆದರೆ ಈ ಶಾಲೆಯ ಗತ ಇತಿಹಾಸವನ್ನು ಕೆದಕುತ್ತಾ ಹೋದರೆ ಇದರ ಹಿಂದೆ ಸ್ವತಂತ್ರ್ಯ ಹೋರಾಟದ ಕಿಚ್ಚು ತೆರೆದು ಕೊಳ್ಳುತ್ತದೆ.ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಬಂಟ್ವಾಳದ ಜನರೂ ತಮ್ಮ ರಕ್ತ, ಬೆವರು ಹರಿಸಿದ್ದರು. ಬ್ರಿಟಿಷ್ ಅಧಿಪತ್ಯದ ವಿರುದ್ದ 1837ರ ಕಲ್ಯಾಣಪ್ಪನ ದಂಗೆಗೆ ಬೆಂಬಲ ನೀಡಿದ್ದ ಬಂಟ್ವಾಳದ ಜನರು ಬಳಿಕ ಬಂಟ್ವಾಳದಲ್ಲಿ ಸಂಘಟಿತ ಸ್ವಾತಂತ್ರ್ಯ ಹೋರಾಟ ನಡೆಸಿದ್ದು ಕ್ರಿ.ಶ. 1920ರಲ್ಲಿ. ಈ ಸಂದರ್ಭ ಮಂಗಳೂರಿಗೆ ಬಂದಿದ್ದ ಮಹಾತ್ಮ ಗಾಂಧೀಜಿ ಅಸಹಕಾರ ಹಾಗೂ ಸತ್ಯಾಗ್ರಹಕ್ಕೆ ಕರೆ ಕೊಟ್ಟು ಹೋಗಿದ್ದರು. 1921ರಲ್ಲಿ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಸಮಿತಿ ರಚನೆಗೊಂಡ ಬಳಿಕ ಬಂಟ್ವಾಳ ಹಾಗೂ ಪಾಣೆಮಂಗಳೂರು ಕೇಂದ್ರಗಳಲ್ಲಿ ಅದರ ಸಮಿತಿ ರಚನೆಯಾಗಿತ್ತು. ಗಾಂಧೀಜಿ1937ರಲ್ಲಿ3 ನೇ ಬಾರಿಗೆ ದ.ಕ. ಜಿಲ್ಲೆಗೆ ಭೇಟಿ ನೀಡಿದಾಗ ಬಂಟ್ವಾಳಕ್ಕೂ ಬಂದಿದ್ದರು. ಪುತ್ತೂರಿನಿಂದ ಬಂಟ್ವಾಳಕ್ಕೆ ಬರುವಾಗ ವಿಟ್ಲ, ಕಲ್ಲಡ್ಕ, ಪಾಣೆಮಂಗಳೂರಿನಲ್ಲಿ ಜನತೆ ಅವರಿಗೆ ನಿಧಿ ಅರ್ಪಿಸಿದ್ದರು. ಈ ಸಂದರ್ಭ ಬಂಟ್ವಾಳದ ಭಂಡಾರಿಬೆಟ್ಟುವಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಗ್ಗ ಕೇಂದ್ರಕ್ಕೆ ಅವರು ಭೇಟಿ ನೀಡಿದ್ದರು. ಇಲ್ಲಿನ ಖಾದಿವ್ರತಿಗಳೊಬ್ಬರು ತಾನು ಸ್ವಂತ ನೂಲು ತೆಗೆದು ನೇಯ್ದ ಬಟ್ಟೆಯನ್ನು ಮಹಾತ್ಮಗಾಂಧಿಗೆ ಅರ್ಪಿಸಿದ್ದರು. ಗಾಂಧಿಜಿ ಈ ಸಂದರ್ಭ ಬಂಟ್ವಾಳದ ಜನರನ್ನು ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಳ್ಳಲು ಪ್ರೇರೆಪಿಸಿದ್ದರು. ಕ್ರಮೇಣ ಈ ಮಗ್ಗ ಕೇಂದ್ರ ಎಸ್‌ವಿಎಸ್ ದೇವಳದ ಆಡಳಿತಕ್ಕೆ ಒಳಪಟ್ಟು ಶಾಲೆಯಾಗಿ ಮಾರ್ಪಡಾಯಿತು. ಇದು ಗಾಂಧೀಜಿ ಭೇಟಿ ನೀಡಿದ ಮಗ್ಗ ಶಾಲೆಯಾಗಿಯೇ ಪ್ರಸಿದ್ದಿ ಪಡೆಯಿತು. ಬಳಿಕ ಶಾಲೆ ಬೇರೆಡೆಗೆ ಸ್ಥಳಾಂತರವಾದಾಗ ಬಂಟ್ವಾಳ ಪಾಲಿಟೆಕ್ನಿಕ್‌ನ ತರಗತಿಗಳು ಇಲ್ಲಿ ಆರಂಭಗೊಂಡವು. ಅದೂ ತನ್ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡ ಬಳಿಕ ಮಗ್ಗ ಶಾಲೆ ನಿರ್ವಹಣೆಯ ಕೊರತೆಯಿಂದಾಗಿ ಪಾಳು ಬೀಳಬೇಕಾಯಿತು.

.

Related posts

Leave a Reply