Header Ads
Header Ads
Breaking News

ಪಿಎಸ್‌ಐ ಜೊತೆಗಿದ್ದ ವಿದ್ಯಾರ್ಥಿ ನಿಗೂಢ ಕಣ್ಮರೆ ಪ್ರಕರಣ:ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿಯ ಪೋಷಕರು

ಮಂಗಳೂರಿನ ಮಾಜಿ ಪಿಎಸ್‌ಐ ಜೊತೆಗಿದ್ದ ವಿದ್ಯಾರ್ಥಿಯೋರ್ವನ ನಿಗೂಢ ಕಣ್ಮರೆ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ತಮ್ಮ ಮಗನನ್ನು ಹುಡುಕಿಕೊಡಿ ಎಂದು ನಾಪತ್ತೆಯಾಗಿರುವ ವಿದ್ಯಾರ್ಥಿ ಪೋಷಕರು ಹೈಕೋರ್ಟ್‌ಗೆ ಹೇಬಿಯಸ್ ಕಾಪರ್ಸ್ ಸಲ್ಲಿಸಿದ್ದ ಪರಿಣಾಮ ಇದೀಗ ಮಾಜಿ ಪಿಎಸ್‌ಐ ಮದನ್ ಹಾಗೂ ಮಂಗಳೂರು ನಗರ ಉರ್ವ ಪೊಲೀಸರು ಹೈಕೋರ್ಟ್ ವಿಚಾರಣೆ ಎದುರಿಸುವಂತಾಗಿದೆ. ಕಳೆದ ಅಕ್ಟೋಬರ್ ತಿಂಗಳಿನಿಂದ ನಾಪತ್ತೆಯಾಗಿರುವ ಶಿವಕುಮಾರ್ ಎಂಬವರ ಪುತ್ರ ವಿನಾಯಕ್‌ಗಾಗಿ ಹೇಬಿಯಸ್ ಕಾರ್ಪಸ್ ಹಾಕಲಾಗಿತ್ತು. ಬಂದರು ಠಾಣೆಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಮದನ್, ಕಳೆದ ವಿಧಾನಸಭಾ ಚುನಾವಣೆ ಮುನ್ನ ಪೊಲೀಸ್ ಇಲಾಖೆಗೆ ರಾಜೀನಾಮೆ ಸಲ್ಲಿಸಿ ಪಕ್ಷೇತರರಾಗಿ ಸ್ಪರ್ಧಿಸಿ ಸೋಲನುಭವಸಿದ್ದರು.

ಆ ಸಂದರ್ಭದಲ್ಲಿ ಇವರ ಜೊತೆ ಯಿದ್ದ ವಿನಾಯಕ್ , ಚುನಾವಣೆ ಬಳಿಕವೂ ಮದನ್ ಅವರ ಒಡನಾಟ ಬಿಟ್ಟಿರಲಿಲ್ಲ. ಕಳೆದ ಏಳು ತಿಂಗಳ ಕಾಲ ಜೊತೆಗಿದ್ದ ವಿನಾಯಕ್ ಅಕ್ಟೋಬರ್ 8 ರಂದು ಬಿಜೈಯ ಅಪಾರ್ಟ್ ಮೆಂಟ್ ನಿಂದ ನಾಪತ್ತೆಯಾಗಿದ್ದ. ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಹೊರತಾಗಿಯೂ, ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ ಎಂದು ವಿನಾಯಕ್ ತಂದೆ ಶಿವಕುಮಾರ್ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಸಲ್ಲಿಸಿದ್ದರು. ಅಲ್ಲದೇ ಇದೀಗ ಹೇಬಿಯಸ್ ಕಾರ್ಪಸ್ ಅರ್ಜಿಗೆ ಉತ್ತರಿಸಿರುವ ಉರ್ವ ಪೊಲೀಸರು ಮಾಜಿ ಪೊಲೀಸ್ ಅಧಿಕಾರಿಯಾಗಿದ್ದ ಮದನ್ ಅವರನ್ನು ರಕ್ಷಿಸುವ ಕೆಲಸ ಮಾಡುತ್ತಿರುವುದಾಗಿ ವಿನಾಯಕ್ ತಂದೆ ಶಿವಕುಮಾರ್ ಆರೊಪಿಸಿದ್ದಾರೆ. ಸದ್ಯ ಹೈಕೋರ್ಟ್ ಗೆ ಹಾಜರಾಗಿರುವ ಮದನ್ ಹಾಗೂ ಉರ್ವ ಪೊಲೀಸ್ ಇನ್ಸ್ ಪೆಕ್ಟರ್ ತಮ್ಮ ವಾದವನ್ನು ಸಲ್ಲಿಸಿದ್ದಾರೆ. ವಾದವನ್ನು ಆಲಿಸಿರುವ ಹೈಕೋರ್ಟ್ ವಿಚಾರಣೆ ಮುಂದೂಡಿದೆ.

Related posts

Leave a Reply