Header Ads
Header Ads
Breaking News

ಪಿಎ ಪಾಲಿಟೆಕ್ನಿಕ್ ಕಾಲೇಜಿನ ವಾರ್ಷಿಕೋತ್ಸವ ಡಾ. ಪಿ.ಎ ಇಬ್ರಾಹಿಂ ಹಾಜಿ ಅವರಿಂದ ಇಲಾಂಟ್ರಿಸ್ ಉದ್ಘಾಟನೆ ಪಿ.ಎ ಸಂಸ್ಥೆ ಮಹತ್ತರ ಅಭಿವೃದ್ಧಿಯನ್ನು ಸ್ಥಾಪಿಸಿದೆ ಸಂಸ್ಥೆಯ ಚೇರ್‌ಮೆನ್ ಡಾ. ಪಿ.ಎ. ಇಬ್ರಾಹಿಂ ಹಾಜಿ ಹೇಳಿಕೆ

ಉಳ್ಳಾಲ: ಕಳೆದ 18 ವರ್ಷಗಳಿಂದ ಇಂಜಿನಿಯರಿಂಗ್ ಕಾಲೇಜಿನ ಮೂಲಕ ಆರಂಭಗೊಂಡ ಸಂಸ್ಥೆ, ಇದೀಗ ಮಹತ್ತರ ಅಭಿವೃದ್ಧಿಯನ್ನು ಸ್ಥಾಪಿಸಿದೆ. ಕಲಿತ ವಿದ್ಯಾರ್ಥಿಗಳು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಹುದ್ದೆಗಳನ್ನು ಪಡೆದಿರುವುದು ಕಾಲೇಜಿನ ಹೆಮ್ಮೆಯಾಗಿದೆ ಎಂದು ಪಿ.ಎ ಶಿಕ್ಷಣ ಸಂಸ್ಥೆಯ ಚೇರ್‌ಮೆನ್ ಡಾ. ಪಿ.ಎ. ಇಬ್ರಾಹಿಂ ಹಾಜಿ ಹೇಳಿದರು.

ಅವರು ಕೊಣಾಜೆ ನಡುಪದವಿನ ಪಿ.ಎ ಪಾಲಿಟೆಕ್ನಿಕ್ ಕಾಲೇಜಿನ ‘ಪೇಸ್ ಆಡಿಟೋರಿಯಂ’ ನಲ್ಲಿ ಗುರುವಾರ ಜರಗಿದ ವಾರ್ಷಿಕೋತ್ಸವ ಸಮಾರಂಭ ‘ ಇಲಾಂಟ್ರಿಸ್ ’ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳು ಕಲಿಕಾ ಜೀವನದಲ್ಲಿ ಉತ್ತಮ ತರಬೇತಿ ಪಡೆದು, ಉತ್ತಮ ಭವಿಷ್ಯ ರೂಪಿಸಿದಾಗ ಕಾಲೇಜಿನ ಆಡಳಿತ ಹಾಗೂ ಸಿಬ್ಬಂದಿ ವರ್ಗದ ಶ್ರಮ ಜತೆಗೆ ಹಿರಿಯರ ಆಸೆಗಳನ್ನು ಪೂರೈಸಿದಂತಾಗುವುದು ಎಂದರು. ಪಾಲಿಟೆಕ್ನಿಕ್ ವಿಭಾಗದ ಪ್ರಾಂಶುಪಾಲ ಪ್ರೊ.ಕೆ.ಪಿ.ಸೂಫಿ ವಾರ್ಷಿಕ ವರದಿ ವಾಚಿಸಿದರು.ಪಿಎ ಕಾಲೇಜು ನಿರ್ದೇಶಕ ಅಬ್ದುಲ್ಲಾ ಇಬ್ರಾಹಿಂ, ಹಣಕಾಸು ವಿಭಾಗದ ನಿರ್ದೇಶಕ ಅಹಮ್ಮದ್ ಕುಟ್ಟಿ, ಪಿಎ ಕಾಲೇಜಿನ ಪ್ರಾಂಶುಪಾಲ ಡಾ.ಅಬ್ದುಲ್ ಶರೀಫ್, ಉಪಪ್ರಾಂಶುಪಾಲ ಪ್ರೊ.ಇಸ್ಮಾಯಿಲ್ ಖಾನ್, ಎಂಬಿಎ ವಿಭಾಗದ ನಿರ್ದೇಶಕ ಡಾ. ಬೀರಾನ್ ಮೊಯ್ದೀನ್, ಡಾ.ಅಬ್ದುಲ್ ರಹಿಮಾನ್, ಶರ್ಫುದ್ದೀನ್, ಪ್ರೊ.ಅಲಿ ಅಶ್ರಫ್.ಕೆ ಉಪಸ್ಥಿತರಿದ್ದರು.
ವರದಿ: ಆರೀಪ್ ಉಳ್ಳಾಲ