Header Ads
Breaking News

ಪಿಕಪ್‌ಗೆ ಡಿಕ್ಕಿಯಾದ ಲಾರಿ : ರಸ್ತೆಯೆಲ್ಲೆಡೆ ಚೆಲ್ಲಿದ ಜೋಳ

ಲಾರಿಯೊಂದು ಅತೀ ವೇಗವಾಗಿ ಮುನ್ನುಗ್ಗಿ ಬಂದು ಮುಂದಿನಿಂದ ಹೋಗುತ್ತಿದ್ದ ಪಿಕಪ್ ವಾಹನಕ್ಕೆ ಸವರಿಕೊಂಡು ಹೋದ ಘಟನೆ ಪಡುಬಿದ್ರಿಯ ಮುಖ್ಯ ಪೇಟೆಯಲ್ಲಿ ನಡೆದಿದೆ. ಈ ಸಂದರ್ಭ ಲಾರಿಯಲ್ಲಿದ್ದ ಜೋಳವು ರಸ್ತೆಯಲ್ಲೆಲ್ಲಾ ಚೆಲ್ಲಿದ್ದು, ರಸ್ತೆಯೆಲ್ಲೆಡೆ ಹರಡಿದ ಜೋಳವನ್ನು ಕೆಲವರು ಕೊಂಡು ಹೋಗುತ್ತಿದ್ದ ದೃಶ್ಯ ಕಂಡುಬಂತು. ಉಡುಪಿ ಕಡೆಯಿಂದ ಪಿಕಪ್ ವಾಹನವೊಂದು ಮಂಗಳೂರು ಕಡೆಗೆ ಹೋಗುತ್ತಿದ್ದು, ಇದರ ಹಿಂದಿನಿಂದ ಜೋಳ ಹೇರಿಕೊಂಡು ಬಂದ ಲಾರಿ ಚಾಲಕ ನಿಯಂತ್ರಣ ಕಳೆದುಕೊಂಡಂತೆ ಮುನ್ನುಗ್ಗಿ ಪಿಕಪ್ ವಾಹನಕ್ಕೆ ಸವರಿಕೊಂಡು ಹೋಗಿದೆ. ಇದರ ಪರಿಣಾಮ ಲಾರಿಯಲ್ಲಿದ್ದ ಜೋಳ ತುಂಬಿದ ಬ್ಯಾಗ್ ಹರಿದು ಜೋಳ ರಸ್ತೆ ಎಲ್ಲೆಡೆ ಚೆಲ್ಲಿ ಹೋಗಿದೆ. ಸ್ಥಳದಲ್ಲಿ ಲಾರಿಯನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ ಲಾರಿಯನ್ನು ಪಿಕಪ್ ಚಾಲಕ ಬಂಟರ ಸಂಘದ ಬಳಿ ತಡೆದು ನಿಲ್ಲಿಸುವಲ್ಲಿ ಸಾರ್ವಜನಿಕರು ಸಫಲರಾಗಿದ್ದಾರೆ. ಬಹುತೇಕ ಜೋಳ ವಾಹನದಡಿಗೆ ಬಿದ್ದು ನಾಶವಾಗಿದೆ. ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಆಗಮಿಸಿದ್ದಾರೆ.

Related posts

Leave a Reply

Your email address will not be published. Required fields are marked *