Header Ads
Breaking News

ಪಿಲಾರು ಮಹಿಳೆಗೆ ಸೋಂಕು ದೃಢ ಹಿನ್ನೆಲೆ : ಪಿಲಾರಿನ ಸುತ್ತಮುತ್ತಲಿನ 5 ಕಿ.ಮೀ. ಸೀಲ್‍ಡೌನ್

ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಯುವತಿಯೋರ್ವಳ ತಾಯಿಗೆ ಕೊರೊನಾ ಸೋಂಕು ದೃಢವಾಗಿದೆ. ಪಿಲಾರು ಒಂದು ಕಿ.ಮೀ ಕಂಟೋನ್ ಮೆಂಟ್ ಹಾಗೂ ಸುತ್ತಮುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿ ಸೀಲ್ ಡೌನ್ ಗೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಎ.12 ರಂದು ಸೋಮೇಶ್ವರ ಗ್ರಾಮದ ಪಿಲಾರು ನಿವಾಸಿ ಯುವತಿಗೆ ನ್ಯುಮೋನಿಯಾ ಇದ್ದ ಹಿನ್ನೆಲೆಯಲ್ಲಿ ಆಕೆಯನ್ನು ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಬಂಟ್ವಾಳದ ಮಹಿಳೆಯಿದ್ದ ಕೊಠಡಿಯಲ್ಲೇ ಯುವತಿಯನ್ನು ದಾಖಲಿಸಲಾಗಿತ್ತು. ಇದೇ ವೇಳೆ ಆಕೆಯ ತಾಯಿ ಜತೆಗಿದ್ದರು. ಇದರಿಂದ ಸೋಂಕು ತಗಲಿರುವ ಸಾಧ್ಯತೆಗಳಿವೆ. ಈ ಮೂಲಕ ಆಸ್ಪತ್ರೆಯ ಒಂದೇ ಕೊಠಡಿಯಲ್ಲಿದ್ದ ನಾಲ್ಕು ಮಂದಿಗ ಕೊರೊನಾ ಪಾಸಿಟಿವ್ ಆಗಿದೆ. ಫಸ್ಟ್ ನ್ಯೂರೋದಲ್ಲಿ ಕೊರೊನಾ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಚಿಕಿತ್ಸೆ ಪಡೆದಿದ್ದ ಯುವತಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಸೆಕೆಂಡರಿ ಕಾಂಟ್ಯಾಕ್ಟ್ ಅನ್ನುವ ನೆಲೆಯಲ್ಲಿ ತಾಯಿಯನ್ನು ವಾರದ ಹಿಂದಷ್ಟೆ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಯುವತಿಯ ತಾಯಿ ಕೂಡಾ ಕ್ಷಯರೋಗ ಇದ್ದವರೆಂದು ತಿಳಿದುಬಂದಿದೆ.

ಯುವತಿಯ ಚಿಕಿತ್ಸೆಗೆ ಲಕ್ಷಾಂತರ ಹಣ ಬೇಕೆಂದು ಆರ್ಥಿಕವಾಗಿ ಹಿಂದುಳಿದ ತಾಯಿ, ಆಕೆಯನ್ನು ಬೇರೆ ಆಸ್ಪತ್ರೆಗೆ ಕೊಂಡೊಯ್ಯುವ ಉದ್ದೇಶದಿಂದ ಎರಡೇ ದಿನದಲ್ಲಿ ಡಿಸ್ಚಾರ್ಜ್ ನಡೆಸಿದ್ದರು. ಬೇರೆ ಆಸ್ಪತ್ರೆಗೂ ಕೊಂಡೊಯ್ಯಲು ಸಾಧ್ಯವಾಗದೆ ನೇರ ಮನೆಗೆ ಹೋಗಿದ್ದರು. ಬಳಿಕ ಅಲ್ಲಿಂದ ಕೋವಿಡ್ ಪರೀಕ್ಷೆಗೆ ಮಗಳನ್ನು ಕೊಂಡೊಯ್ದ ನಂತರ ವರದಿ ನೆಗೆಟಿವ್ ಆದ ಹಿನ್ನೆಲೆಯಲ್ಲಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಯ ಐಸೊಲೇಷನ್ ಸೆಂಟರ್ ನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಅಲ್ಲಿಂದಲೂ ಡಿಸ್ಚಾರ್ಜ್ ಆದ ನಂತರ ಮನೆಯಲ್ಲೇ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು.

Related posts

Leave a Reply

Your email address will not be published. Required fields are marked *