Header Ads
Header Ads
Breaking News

ಪಿಲಿಕುಳ ಉದ್ಯಾನಕ್ಕೆ ತಾರಾ ಪಟ್ಟ ಏಷ್ಯಾದ ಪ್ರಥಮ ೮ಕೆ ತಂತ್ರಜ್ಞಾನದ ಖಗೋಳ ವೀಕ್ಷಣಾಲಯ ಮಾರ್ಚ್ 1ರಂದು ತಾರಾಲಯದ ಉದ್ಘಾಟನೆ

ಮಂಗಳೂರಿನ ಪಿಲಿಕುಳದಲ್ಲಿ ದೇಶದ ಮೊದಲ 3ಡಿ ತಾರಾಲಯದ ಉದ್ಘಾಟನೆಯ ಪೂರ್ವ ಭಾವಿಯಾಗಿ ಪತ್ರಿಕಾ ಮತ್ತು ಟಿವಿ ಮಾಧ್ಯಮ ಮಿತ್ರರಿಗಾಗಿ ಪತ್ರಿಕಾಗೋಷ್ಠಿ ಮತ್ತು ತಾರಾಲಯದಲ್ಲಿ ಉದ್ಘಾಟನಾ ಪೂರ್ವ ಪ್ರದರ್ಶನ ಕಾರ್ಯಕ್ರಮ ನಡೆಯಿತು.ಪಿಲಿಕುಳದ ಸ್ವಾಮಿ ವಿವೇಕಾನಂದ ತಾರಾಲಯವು ದೇಶದ ಪ್ರಥಮ ತಾರಾಲಯ. ಇದು ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯಕ್ಕೆ ಮತ್ತು ವಿಶೇಷವಾಗಿ ಪಿಲಿಕುಳ ನಿಸರ್ಗಧಾಮಕ್ಕೆ ಸಂದ ಹೆಗ್ಗಳಿಕೆ.
3ಡಿ, 8ಏ ಡಿಜಿಟಲ್ ಪ್ಲಾನೆಟೋರಿಯಂನ್ನು ಪಡೆದ ಮಂಗಳೂರು ದೇಶದ ಪ್ರಥಮ ನಗರ ಇದಾಗಿದೆ. ಈ ತಾರಾಲಯವು, ಸಿಂಗಾಪುರ, ಶಾಂಘೈ-ಚೀನಾ, ರಿಚ್‌ಮಂಡ್ ? ಯುಎಸ್‌ಎ, ಆ?ಯನ್ಸ್‌ಯೊಂಗ್- ಕೊರಿಯಾ, ಕಾಲ್‌ಗೇರಿ-ಕೆನಡಾ, ಬ್ರಿಸ್ಪಾಲ್ ? ಯುಕೆ, ಹ್ಯಾಮ್‌ಬರ್ಗ್-ಜರ್ಮನಿ, ಟೋಕಿಯೋ-ಜಪಾನ್, ಲೋಡ್ಜ್ ? ಪೋಲೆಂಡ್ ಮುಂತಾದ ಅಂತರಾಷ್ಟ್ರೀಯ ಮಟ್ಟದ ಉನ್ನತ ತಾರಾಲಯಗಳಿಗೆ ಸರಿಸಮಾನವಾಗಿರುತ್ತದೆ.
ಈ ಶ್ರೇಣಿಯ ನಗರಗಳಲ್ಲಿ ನಮ್ಮ ಮಂಗಳೂರು ಸೇರಿದಂತಾಗುತ್ತದೆ.ಪಿಲಿಕುಳ ನಿಸರ್ಗಧಾಮದ ವತಿಯಿಂದ ಮೊತ್ತ ಮೊದಲಿಗೆ ರೂ. 8.00 ಕೋಟಿ ಯೋಜನಾ ವರದಿಯನ್ನು ತಾರಾಲಯ ನಿರ್ಮಾಣಕ್ಕೆ ಕರ್ನಾಟಕ ಸರಕಾರಕ್ಕೆ ಸಲ್ಲಿಸಲಾಗಿತ್ತು. ಆಗ ತಾರಾಲಯ ನಿರ್ಮಾಣದ ಕುರಿತು ಹೆಚ್ಚಿನ ಮಾಹಿತಿ ಇರಲಿಲ್ಲ. ವಿವರ ಕಲೆ ಹಾಕಿಕೊಂಡಾಗ 3ಡಿ ತಾರಾಲಯ ನಿರ್ಮಾಣಕ್ಕೆ ಸುಮಾರು ರೂ. 15.50 ಕೋಟಿ ವೆಚ್ಚಕ್ಕೆ ಯೋಜನಾ ವರದಿಯನ್ನು ಪರಿಷ್ಕರಿಸಲಾಯಿತು. ಇದನ್ನು ಮಂಜೂರು ಮಾಡಿದ ಕರ್ನಾಟಕ ಸರಕಾರ, ಇದರ ತಾಂತ್ರಿಕ ಅಧ್ಯಯನಕ್ಕೆ ಹಾಗೂ ಸರಿಯಾದ ಯೋಜನಾ ವೆಚ್ಚ ಅಂತಿಮಗೊಳಿಸಲು ಬೆಂಗಳೂರಿನ ತಾರಾಲಯ ನಿರ್ದೇಶಕರಾದ ಡಾ. ಶುಕ್ರೆಯವರ ನೇತೃತ್ವದಲ್ಲಿ ತಾಂತ್ರಿಕ ಸಮಿತಿಯನ್ನು ನೇಮಿಸಲಾಗಿತ್ತು. ರಾಜ್ಯ ಸರಕಾರ 24.50 ಕೋಟಿ ಮಂಜೂರು ಮಾಡಿ ಸ್ವಾಮಿ ವಿವೇಕಾನಂದರ 150ನೇ ವರ್ಷದ ಜನ್ಮ ದಿನದ ಆಚರಣೆಯ ಅಂಗವಾಗಿ ಸ್ವಾಮಿ ವಿವೇಕಾನಂದ ತಾರಾಲಯ ಎಂದು ಹೆಸರಿಟ್ಟು ಆದೇಶಿಸಿತು. ಪಿಲಿಕುಳ ತಾರಾಲಯದ ಪೂರ್ತಿ ದಿವಸ ಹಲವು 2ಡಿ ಮತ್ತು 3ಡಿ ಪ್ರದರ್ಶನಗಳನ್ನು ನೀಡುತ್ತದೆ. ಈ ಪ್ರದರ್ಶನಗಳು ಖಗೋಳ ಶಾಸ್ತ್ರ, ಭೂ ಮಂಡಲ, ನೈಸರ್ಗಿಕ, ಪರಿಸರ ವಿಜ್ಞಾನ, ಇತಿಹಾಸ ಮೇಲೆ ಇರುವುದು. ಇವುಗಳು ಇಂಗ್ಲೀಷ್, ಕನ್ನಡ, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಇರುವುದು. ಶಾಲಾ ಸಿಲೆಬಸ್ ನ ಮೇಲೂ ಕೆಲವು ಪ್ರದರ್ಶನಗಳು ಇರುವವು. ಸುಮಾರು 20 ರಿಂದ 25ನಿಮಿಷದ ಕರ್ನಾಟಕ ದರ್ಶನ ಪ್ರದರ್ಶನ ಕೂಡಾ ಇದೆ.
ವರದಿ: ನಾಗೇಶ್ ಕಾವೂರು ಮಂಗಳೂರು

Related posts

Leave a Reply