Breaking News

ಪಿಲಿಕುಳ ತ್ರೀ ಡಿ ತಾರಾಲಯ ಬೇಗ ಬಳಕೆಗೆ, ಮಂಗಳೂರಿನಲ್ಲಿ ವಿಜ್ಞಾನ ಸಚಿವ ಸೀತಾರಾಂ

ಪಿಲಿಕುಳ ನಿಸರ್ಗಧಾಮದ ಆವರಣದಲ್ಲಿ ದೇಶದ ಮೊದಲ ತ್ರೀ ಡಿ ಹೈಬ್ರಿಡ್ ತಾರಾಲಯ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಮೂರು ತಿಂಗಳ ಗಡುವು ವಿಧಿಸಿದ್ದು, ಪ್ರಸಕ್ತ ವರ್ಷದಲ್ಲೇ ಅದನ್ನು ಸಾರ್ವಜನಿಕರ ಬಳಕೆಗೆ ಸಮರ್ಪಿಸಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ. ಆರ್. ಸೀತಾರಾಂ ತಿಳಿಸಿದರು.
ಪಿಲಿಕುಳ ನಿಸರ್ಗ ಧಾಮಕ್ಕೆ ಭೇಟಿ ನೀಡಿ ತಾರಾಲಯದ ಕಾಮಗಾರಿ ಪರಿಶೀಲಿಸಿದ ಬಳಿಕ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾರಾಲಯದ ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆಗಸ್ಟ್ ೧೫ರೊಳಗೆ ಅಮೆರಿಕದಿಂದ ತ್ರೀ ಡಿ ಹೈಬ್ರಿಡ್ ಯಂತ್ರೋಪಕರಣಗಳು ತಲುಪಲಿವೆ. ಸೆಪ್ಟೆಂಬರ್ ೧ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ೨೦ ವರ್ಷಗಳ ಹಿಂದೆ ಸಣ್ಣ ತಾರಾಲಯ ಸ್ಥಾಪಿಸುವ ಪ್ರಸ್ತಾವವಿತ್ತು. ರೂ. ೧ ಕೋಟಿ ಅನುದಾನ ಹಂಚಿಕೆಯಿಂದ ಆರಂಭವಾದ ಯೋಜನೆ ಈಗ ರೂ. ೩೫ ಕೋಟಿ ವೆಚ್ಚದಲ್ಲಿ ಪೂರ್ಣಗೊಳ್ಳುತ್ತಿದೆ. ಅಂದಾಜುಪಟ್ಟಿ ಪರಿಷ್ಕರಣೆ ಮತ್ತು ಹೆಚ್ಚುವರಿ ಅನುದಾನ ಬಿಡುಗಡೆ ಪ್ರಸ್ತಾವಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಇದು ಜಗತ್ತಿನ ೨೧ನೇ ತ್ರೀ ಡಿ ಹೈಬ್ರಿಡ್ ತಾರಾಲಯ ಎಂಬ ಕೀರ್ತಿಗೆ ಪಾತ್ರವಾಗಲಿದೆ ಎಂದು ಹೇಳಿದರು.
ಬೆಂಗಳೂರಿನ ಜವಾಹರಲಾಲ್ ನೆಹರೂ ತಾರಾಲಯದ ಮಾದರಿಯಲ್ಲಿ ನಿರ್ವಹಣೆಗಾಗಿ ಪ್ರತಿ ವರ್ಷ ರೂ. ೧.೫ ಕೋಟಿ ಅನುದಾನ ನೀಡಲಾಗುವುದು. ತಾರಾಲಯದಲ್ಲಿ ಅಳವಡಿಸುವ ಯಂತ್ರೋಪಕರಣಗಳಿಗೆ ಐದು ವರ್ಷಗಳ ವಾರೆಂಟಿ ಇರುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಎಲ್ಲ ಜಿಲ್ಲೆಗಳಲ್ಲೂ ವಿಜ್ಞಾನ ಕೇಂದ್ರ ಹಾಗೂ ಮಿನಿ ತಾರಾಲಯಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಮಡಿಕೇರಿ, ಬಾಗಲಕೋಟೆ ಮತ್ತು ವಿಜಯಪುರಗಳಲ್ಲಿ ವಿಜ್ಞಾನ ಕೇಂದ್ರ ಹಾಗೂ ಮಿನಿ ತಾರಾಲಯ ನಿರ್ಮಿಸ ಲಾಗುವುದು. ಹುಬ್ಬಳ್ಳಿಯಲ್ಲಿ ತ್ರೀ ಡಿ ತಾರಾಲಯ ನಿರ್ಮಿಸಲಾಗುತ್ತಿದೆ. ಗದಗದಲ್ಲೂ ವಿಜ್ಞಾನ ಕೇಂದ್ರ ಮತ್ತು ತಾರಾಲಯ ನಿರ್ಮಾಣ ಪ್ರಸ್ತಾವ ಪರಿಶೀಲನೆ ಯಲ್ಲಿದೆ ಎಂದು ತಿಳಿಸಿದರು.
ಪಿಲಿಕುಳ ನಿಸರ್ಗ ಧಾಮವನ್ನು ಸಿಂಗಪುರದ ಸೆಂಟೋಸ ದ್ವೀಪದ ಮಾದರಿಯಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ಯೋಜನೆಯೊಂದನ್ನು ರೂಪಿಸಲಾಗುವುದು. ವಿಜ್ಞಾನ ಮತ್ತು ತಂತ್ರಜ್ಞಾನ, ಪ್ರವಾಸೋದ್ಯಮ, ಪರಿಸರ, ಕನ್ನಡ ಮತ್ತು ಸಂಸ್ಕೃತಿ ಇಲಾ ಖೆಗಳ ಸಹಯೋಗದಲ್ಲಿ ನಿಸರ್ಗಧಾಮಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದ ಗಿಸಲು ವಿಶೇಷ ಪ್ರಸ್ತಾವ ಸಿದ್ಧಪಡಿಸಲಾ ಗುವುದು. ಪ್ರವಾಸಿಗರ ಆಕರ್ಷಣೆಗೆ ಪೂರಕವಾಗಿ ಈ ಯೋಜನೆ ಜಾರಿಗೊಳಿ ಸಲಾಗುವುದು ಎಂದು ಸಚಿವರು ಹೇಳಿದರು.

Related posts

Leave a Reply