Header Ads
Header Ads
Header Ads
Breaking News

ಪಿ.ಎ.ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ

 

ಕೊಣಾಜೆ: ಇಂದಿನ ಆಧುನಿಕ ಜಗತ್ತು ಸ್ಪರ್ಧಾತ್ಮಕವಾಗಿದ್ದು ಹಾಗೆಯೇ ಇಂಜಿನಿಯರಿಂಗ್ ಕ್ಷೇತ್ರದಲ್ಲಿಯೂ ಹಲವಾರು ಸವಾಲುಗಳು ಎದುರಾಗುತ್ತಿದ್ದು ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಮೌಲ್ಯಯುತ ಶಿಕ್ಷಣದೊಂದಿಗೆ ಮುನ್ನಡೆಯುವುದರೊಂದಿಗೆ ವಿದ್ಯಾರ್ಥಿಗಳು ಕೂಡಾ ಜ್ಞಾನ ಕೌಶಲ್ಯದೊಂದಿಗೆ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕಿದೆ ಎಂದು ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಎಂ.ಅಬ್ದುಲ್ ಸಲಾಮ್ ಅವರು ಅಭಿಪ್ರಾಯ ಪಟ್ಟರು.
ಅವರು ಶನಿವಾರ ನಡುಪದವು ಪಿ.ಎ.ಇಂಜಿನಿಯರಿಂಗ್ ಕಾಲೇಜಿನಲ್ಲಿ 2017ನೇ ಸಾಲಿನ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಉನ್ನತ ಮಾನವೀಯ ಮೌಲ್ಯಗಳೊಂದಿಗೆ ಇಂದಿನ ಆಧುನಿಕತೆಗೆ ಪೂರಕವಾಗುವುವಂತೆ ವಿದ್ಯಾರ್ಥಿಗಳು ತಮಗಿರುವ ಅವಕಾಶಗಳನ್ನು ಬಳಸಿಕೊಂಡು ಜೀವನದಲ್ಲಿ ಉನ್ನತ ಸಾಧನೆಯತ್ತ ಮುನ್ನಡೆಯಬೇಕು. ಅಲ್ಲದೆ ದೇಶದ ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪಿ.ಎ.ಇಂಜಿನಿಯರಿಂಗ್ ಕಾಲೇಜು ಒಂದಾಗಿ ಗುರುತಿಸಲ್ಪಟ್ಟಿದೆ ಎಂದರು.
ಸಮಾಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಎಮ್‌ಎಸ್‌ಎಂಇ ಇಲಾಖೆಯ ನಿರ್ದೇಶಕ ಶ್ರೀನಿವಾಸ ಎಂ.ಜಮಖಂಡಿ ಅವರು, ಪದವಿ ಪ್ರದಾನ ಕಾರ್ಯಕ್ರಮವು ಜೀವನದ ಅಮೂಲ್ಯ ಕ್ಷಣಗಳಾಗಿದ್ದು ವಿದ್ಯಾರ್ಥಿಗಳ ಈ ಸಾಧನೆಯಲ್ಲಿ ಪೋಷಕರ ಪಾತ್ರವು ಪ್ರಮುಖವಾದುದು. ಭಾರತವು ಇಂದು ವರ್ಷಕ್ಕೆ ಎಷ್ಟೋ ಇಂಜಿನಿಯರ್‌ಗಳನ್ನು ಸೃಷ್ಟಿ ಮಾಡುವ ದೇಶವಾಗಿ ಗುರುತಿಸಲ್ಪಟ್ಟಿದೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರಕ್ಕೆ ಉತ್ತಮ ಭವಿಷ್ಯವಿದ್ದು, ವಿದ್ಯಾರ್ಥಿಗಳು ಮೌಲ್ಯಯುತವಾದ ಶಿಕ್ಷಣದೊಂದಿಗೆ ಪರಿಶ್ರಮದೊಂದಿಗೆ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಿಎಸಿಇ ಗ್ರೂಪ್ ಅಧ್ಯಕ್ಷರಾದ ಡಾ.ಪಿ.ಎ.ಇಬ್ರಾಹಿಂ ಹಾಜಿ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಸವಾಲುಗಳನ್ನು ಜ್ಞಾನ ಕೌಶಲ್ಯದೊಂದಿಗೆ ಎದುರಿಸಿ ಮುನ್ನಡೆಯಬೇಕಿದೆ. ಇದರಲ್ಲಿ ಯುವ ಸಮುದಾಯದ ಪಾತ್ರವು ಪ್ರಮುಖವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಐಟಿಇಎಸ್‌ಡಬ್ಲ್ಯು ಇದರ ಪ್ರಾಧೇಶಿಕ ಅಧಿಕಾರಿ ಡಾ.ಯು ರಮೇಶ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಿ.ಎ.ಕಾಲೇಜಿನ ಎಕ್ಸಿಕ್ಯೂಟಿವ್ ಡೈರಕ್ಟರ್ ಅಬ್ದುಲ್ಲಾ ಇಬ್ರಾಹಿಂ, ಪ್ರಾಂಶುಪಾಲರಾದ ಡಾ.ಅಬ್ದುಲ್ ಶರೀಫ್, ಉಪಪ್ರಾಂಶುಪಾಲ ಡಾ.ರಮೀಝ್, ಪಿ.ಎ.ಕಾಲೇಜಿನ ಆಡಳಿತಾತ್ಮಕ ವಿಭಾಗದ ಪ್ರೊ.ಸರ್ಪರಾಝ್ ಹಾಸಿಂ, ಆಡಳಿತ ನಿರ್ದೇಶಕ ಕೆ.ಎಂ.ಹನೀಫ್, ಡಾ.ಪಾಲಾಕ್ಷಪ್ಪ, ಡಾ.ಬಿರಾನ್ ಮೊಯ್ದಿನ್, ಡಾ.ಕೃಷ್ಣ ಪ್ರಸಾದ್, ಪ್ರೊ.ಜಾನ್ ವಾಲ್ಡರ್, ಅಬ್ದುಲ್ ಮಜೀದ್, ಮಹಮ್ಮದ್ ಹುಸೈನ್, ಅಹ್ಮದ್ ಕುಟ್ಟಿ, ಡಾ.ಝಾಹಿದ್ ಅನ್ಸಾರಿ, ಡಾ.ಅಬ್ದುಲ್ ರಹಿಮಾನ್, ಡಾ.ಶರ್ಮಿಳಾ ಕುಮಾರಿ, ಪ್ರೊ.ಇಸ್ಮಾಯಿಲ್ ಶಾಫಿ, ನಬೀಲ್ ಅಹ್ಮದ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವರದಿ: ಆರೀಪ್ ಕಲ್ಕಟ್ಟ ಉಳ್ಳಾಲ

Related posts

Leave a Reply