Header Ads
Breaking News

ಪಿ.ಎ. ತಾಂತ್ರಿಕ ಮಹಾ ವಿದ್ಯಾಲಯದ ಸಹಯೋಗದಲ್ಲಿ ‘ರಾಷ್ಟ್ರೀಯ ಇಂಧನ ಸಪ್ತಾಹ ವತಿಯಿಂದ ಜನ ಜಾಗೃತಿ ಜಾಥ ’

ಪಿ.ಎ. ತಾಂತ್ರಿಕ ಮಹಾ ವಿದ್ಯಾಲಯದ ವತಿಯಿಂದ ಡಿಸೆಂಬರ್ 19ರಂದು ರಾಷ್ಟ್ರೀಯ ಇಂಧನ ಸಪ್ತಾಹ ಆಚರಣೆ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಹಾಗೂ ಎನ್.ಎಸ್.ಎಸ್. ಘಟಕ ಪಿ. ಎ. ತಾಂತ್ರಿಕ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 19 ಗುರುವಾರದಂದು ‘ರಾಷ್ಟ್ರೀಯ ಇಂಧನ ಸಪ್ತಾಹ’ ಆಚರಣೆಯನ್ನು ಆಚರಿಸಲಾಯಿತು. ಸಾರ್ವಜನಿಕ ಹಾಗೂ ವಿದ್ಯಾರ್ಥಿಗಳಲ್ಲಿ ಇಂಧನ ಉಳಿತಾಯ ಮತ್ತು ನವೀಕರಿಸಬಹುದಾದ ಇಂಧನ ಬಗ್ಗೆ ಅರಿವು ಮೂಡಿಸಲು ಹಮ್ಮಿಕೊಂಡ ಜಾಗೃತಿ ಜಾಥಾವನ್ನು ಪ್ರಾಂಶುಪಾಲರಾದ ಡಾ. ಅಬ್ದುಲ್ ಶರೀಫ್‌ರವರು ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಶೈಕ್ಷಣಿಕ ನಿರ್ದೇಶಕ ಡಾ. ಸರ್ಫ್‌ರಾಜ್ ಹಾಶಿಂ ಜೆ, ಉಪ ಪ್ರಾಂಶುಪಾಲರಾದ ಡಾ. ರಮೀಝ್ ಎಮ್. ಕೆ., ವಿದ್ಯಾರ್ಥಿಗಳು, ಸಾರ್ವಜನಿಕರು, ಕಾಲೇಜಿನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳಿಂದ ಇಂಧನ ಉಳಿತಾಯ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಯಿತು. ಡಾ. ಅಬ್ದುಲ್ ರಹಿಮಾನ್, ಡಾ. ಪಾಲಾಕ್ಷಪ್ಪ ಹಾಗೂ ಪ್ರೊ. ಜಾನ್ ವಾಲ್ಡರ್‌ರವರು ಇಂಧನ ಉಳಿತಾಯ ಹಾಗೂ ಇದರಿಂದ ಆಗುವ ಉಪಯೋಗಗಳ ಬಗ್ಗೆ ತಿಳಿಸಿಕೊಟ್ಟರು. ಕಾಲೇಜಿನ ಎನ್.ಎಸ್.ಎಸ್. ಘಟಕದ ಅಧಿಕಾರಿ ಪ್ರೊ. ಇಸ್ಮಾಯಿಲ್, ಶಾರೀರಿಕ ನಿರ್ದೇಶಕರಾದ ಇಕ್ಬಾಲ್, ಪ್ರೊ. ಶಾಫಿ, ಪ್ರೊ. ಮಜೀದ್, ಪ್ರೋ. ಸಿ.ವಿ ಪೂಜಾರ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ. ಮಿತ್ರಾ ಕಾರ್ಯಕ್ರಮ ನಿರೂಪಿಸಿದರು.

Related posts

Leave a Reply

Your email address will not be published. Required fields are marked *